* ಕುಷ್ಠರೋಗ ನಿರ್ಮೂಲನೆ ಮಾಡಿದ ವಿಶ್ವದ ಮೊದಲ ದೇಶ ಜೊರ್ಡಾನ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. WHO ಡೈರೆಕ್ಟರ್-ಜನರಲ್ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಸಾಧನೆಯನ್ನು ಶ್ಲಾಘಿಸಿದರು.
* ಜೋರ್ಡಾನ್ 20 ವರ್ಷಗಳಿಂದ ಕುಷ್ಠರೋಗದ ಯಾವುದೇ ಸ್ಥಳೀಯ ಪ್ರಕರಣಗಳನ್ನು ವರದಿ ಮಾಡಿಲ್ಲ. WHO ನಿಂದ ನಿಯೋಜಿಸಲ್ಪಟ್ಟ ಸ್ವತಂತ್ರ ಪರಿಶೀಲನಾ ತಂಡವು ಸಂಪೂರ್ಣ ಮೌಲ್ಯಮಾಪನದ ನಂತರ ಜೋರ್ಡಾನ್‌ನ ಕಾಯಿಲೆಯ ನಿರ್ಮೂಲನೆಯನ್ನು ಮೌಲ್ಯೀಕರಿಸಿದೆ ಎಂದು ದೃಢಪಡಿಸಿತು.
* ಪೂರ್ವ ಮೆಡಿಟರೇನಿಯನ್‌ನ WHO ಪ್ರಾದೇಶಿಕ ನಿರ್ದೇಶಕ ಡಾ. ಹನನ್ ಬಾಲ್ಕಿ, ಜೋರ್ಡಾನ್‌ನ ಸಾಧನೆಯು ಇತರ ರಾಷ್ಟ್ರಗಳಿಗೆ ಪೂರ್ವನಿದರ್ಶನವಾಗಿದೆ ಎಂದು ಗಮನಿಸಿದರು.
* ಇಂಥ ರೋಗಗಳ ನಿರ್ಮೂಲನೆ ಮಾಡುವ ಮೂಲಕ ದೇಶವು ಆರ್ಥಿಕ, ಆರೋಗ್ಯ ವಲಯದಲ್ಲಿ ಪ್ರಗತಿ ಸಾಧಿಸಬಹುದು ಎಂದು WHO ಹೇಳಿದೆ. ಈ ಯಶಸ್ಸು ಕೇವಲ ರೋಗ ನಿರ್ಮೂಲನೆ ಮಾತ್ರವಲ್ಲ, ಜನರ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ತೊಡೆದುಹಾಕಲಿದೆ ಎಂದು ಆನ್ನೇಯ ಏಷ್ಯಾದ WHO ಪ್ರಾದೇಶಿಕ ನಿರ್ದೇಶಕ ಸೈಮಾ ವಾದ್ ಹೇಳಿದ್ದಾರೆ.
ಜೊರ್ಡಾನ್ ಕುಷ್ಠರೋಗ ನಿರ್ಮೂಲನಾ ದೇಶ
Published by Jyoti Angadi
23 ಸೆಪ್ಟೆಂಬರ್ 2024