* ಭಾರತದಲ್ಲಿ ಮೊದಲ ಬಾರಿಗೆ ಜನವರಿ,16ರಂದು ಲೋಕಪಾಲ್ ದಿನ ಆಚರಿಸಲಾಗುತ್ತಿದ್ದು, 2024ರ ಮಾರ್ಚ್.14ರಂದು ನಡೆದ ಸಭೆಯ ಬಳಿಕ ಭಾರತದಲ್ಲಿ ಲೋಕಪಾಲ್ ಅಸ್ತಿತ್ವಕ್ಕೆ ಬಂದಿದೆ. ಇದರ ನೆನಪಿಗಾಗಿ ಈ ವರ್ಷದಿಂದ ಲೋಕಪಾಲ್ ದಿನ ಆಚರಿಸಲಾಗುತ್ತದೆ.
* ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ದೇಶದ ಅಟಾರ್ನಿ ಜನರಲ್ ಆರ್.ವೆಂಕಟ್‌ರಮಣಿ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಸ್ಟೀಸ್ ಎನ್ ಸಂತೋಷ್ ಹೆಗ್ಡೆ ಹಾಗೂ ಅಣ್ಣ ಹಜಾರೆ ಅವರನ್ನು ಸನ್ಮಾನಿಸಲಾಗುತ್ತದೆ.
* "ಲೋಕಪಾಲ್ ದಿನದ ಮೊದಲ ಸ್ಮರಣೆಯನ್ನು ಜನವರಿ 16, 2025 ರಂದು ಮಾಣೆಕ್ಷಾ ಕೇಂದ್ರದ ಜೋರಾವರ್ ಸಭಾಂಗಣದಲ್ಲಿ ಮುಖ್ಯ ಅತಿಥಿಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಉಪಸ್ಥಿತಿಯಲ್ಲಿ ನಿಗದಿಪಡಿಸಲಾಗಿದೆ" ಎಂದು ಲೋಕಪಾಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶುಕ್ರವಾರ, 03 ಜನವರಿ 2025
11:19 ಪೂರ್ವಾಹ್ನ
Daily PDF
ಜನವರಿ 16 : ಲೋಕಪಾಲ್ ದಿನಾಚರಣೆ
Authored by:
Bhagya R K