* 2021 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ರಾಷ್ಟ್ರೀಯ ಜನಗಣತಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸರ್ಕಾರ ಸೆಪ್ಟೆಂಬರ್ 15 ರಂದು ಘೋಷಿಸಿತು.
* ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ನಡೆಸೇಬೇಕೇ ಎನ್ನುವುದು ತೀರ್ಮಾನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
* 1881 ರಿಂದಲೂ ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದ್ದು, 2020ರ ಏಪ್ರಿಲ್ 1ರಂದೇ ಆರಂಭ ಆರಂಭವಾಗಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.
* ಅಧಿಕಾರಿಯೊಬ್ಬರ ಪ್ರಕಾರ ಜನಗಣತಿ ಪ್ರಕ್ರಿಯೆ ನಡೆಸಲು ಅಂದಾಜು ₹ 12 ಸಾವಿರ ಕೋಟಿ ವೆಚ್ಚ ಆಗಬಹುದು. ಮುಂದೆ ನಡೆಯಲಿರುವ ಜನಗಣತಿಯು ಪ್ರಥಮ ಡಿಜಿಟಲ್ ಜನಗಣತಿ ಆಗಿರಲಿದೆ.
* ಜನಗಣತಿ ನೋಂದಣಿ ಪ್ರಧಾನ ಆಯುಕ್ತಾಲಯವು ಜನಗಣತಿ ಪ್ರಕ್ರಿಯೆಗಾಗಿ ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಮೊಬೈಲ್ ಫೋನ್, ಸಂಪರ್ಕವಿದೆಯೇ, ಬೈಸಿಕಲ್, ಸ್ಕೂಟರ್ ,ಮೊಪೆಡ್ ಇವೆಯೇ , ನಾಲ್ಕು ಚಕ್ರ ವಾಹನಗಳಿವೆಯೇ ಎಂಬ ಪ್ರಶ್ನೆಗಳು ಇದರಲ್ಲಿ ಸೇರ್ಪಡೆಯಾಗಿವೆ.
ಸೋಮವಾರ, 16 ಸೆಪ್ಟೆಂಬರ್ 2024
3:17 ಅಪರಾಹ್ನ
Daily PDF
ಜನಗಣತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ : ಜಾತಿ ಕಾಲಂ ಇನ್ನೂ ನಿರ್ಧಾರವಾಗಿಲ್ಲ
Authored by:
Jyoti Angadi