* ಕೇಂದ್ರ ಸರ್ಕಾರ ಈ ಬಾರಿ ದೇಶದ ಮೊದಲ ಡಿಜಿಟಲ್ ಜನಗಣತಿಗೆ ತಯಾರಿ ನಡೆಸುತ್ತಿದೆ. ಇದರ ಭಾಗವಾಗಿ ಜನಗಣತಿಯ ಪ್ರಕ್ರಿಯೆಗೆ ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
* ಈ ಬಾರಿ ನಾಗರಿಕರು ತಾವೇ ತಮ್ಮ ದತ್ತಾಂಶವನ್ನು ಆ್ಯಪ್ ಅಥವಾ ಪೋರ್ಟಲ್ ಮೂಲಕ ದಾಖಲಿಸಬಹುದಾಗಿದೆ. ಇದು ಮೊಬೈಲ್ ಆ್ಯಪ್ ಮೂಲಕ ನಡೆಯುವ ಮೊದಲ ಜನಗಣತಿ ಆಗಲಿದೆ.
* ಜನಗಣತಿಗೆ ಬಳಸುವ ಆ್ಯಪ್‌ಗಳು ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿವೆ, ಇದರಿಂದಾಗಿ ಹೆಚ್ಚು ಜನರಿಗೆ ಬಳಸಲು ಸುಲಭವಾಗುತ್ತದೆ.
* ದತ್ತಾಂಶ ಸಂಗ್ರಹ, ವರ್ಗಾವಣೆ ಮತ್ತು ಶೇಖರಣೆಯ ಎಲ್ಲ ಹಂತಗಳಲ್ಲಿ ಭದ್ರತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ, 09 ಜುಲೈ 2025
11:26 ಪೂರ್ವಾಹ್ನ
Daily PDF
ಜನಗಣತಿ ದತ್ತಾಂಶ ದಾಖಲಿಸಲು ಪೋರ್ಟಲ್
Authored by:
Jyoti Angadi