* ದೇಶದಲ್ಲಿ ಮೊದಲ ಬಾರಿಗೆ ಜಲಜನಕ ಇಂಧನ ಪೂರಿತ ಟ್ರಕ್‌ಗಳ ಪ್ರಾಯೋಗಿಕ ಸಂಚಾರಕ್ಕೆ ಟಾಟಾ ಮೋಟರ್ಸ್ ಮಂಗಳವಾರ(ಮಾರ್ಚ್ 4) ಚಾಲನೆ ನೀಡಿದೆ.
* ಟಾಟಾ ಮೋಟಾರ್ಸ್ 2070ರ ಇಂಗಾಲ ಶೂನ್ಯ ಗುರಿಯನ್ನು ತಲುಪುವ ಹೈಡ್ರೋಜನ್ ಚಾಲಿತ ಭಾರೀ ಟ್ರಕ್‌ಗಳ ಪ್ರಯೋಗವನ್ನು ಆರಂಭಿಸಿದೆ, ಪರಿಸರ ಸ್ನೇಹಿ ವಾಹನಗಳತ್ತ ಮಹತ್ವದ ಹೆಜ್ಜೆ ಇಟ್ಟಿದೆ.
* ಪ್ರಾಯೋಗಿಕ ಸಂಚಾರದ ಅವಧಿ 24 ತಿಂಗಳಾಗಿದ್ದು, 16 ಅತ್ಯಾಧುನಿಕ ಟ್ರಕ್‌ಗಳು ಸಂಚರಿಸಲಿವೆ.
* ಈ ಟ್ರಕ್ ಪ್ರಾಯೋಗಿಕಗಳು ಜಲಜನಕದ ಆಂತರಿಕ ಸಂಚಾರದ ಅವಧಿ 2 ವರ್ಷ ದಹನಕಾರಿ ಎಂಜಿನ್ ಮತ್ತು ಇಂಧನ ಕೋಶ ತಂತ್ರಜ್ಞಾನವನ್ನು ಹೊಂದಿವೆ. ಮುಂಬಯಿ, ಪುಣೆ, ದಿಲ್ಲಿ, ಸೂರತ್, ವಡೋದರಾ, ಜೆಮ್‌ಶೆಡ್‌ಪುರ ಹಾಗೂ ಕಳಿಂಗ ನಗರದ ಪ್ರಮುಖ ಮಾರ್ಗಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಿದೆ.
* ದೀರ್ಘಕಾಲದ ಪ್ರಯಾಣಕ್ಕೆ ವಿದ್ಯುತ್‌ಚಾಲಿತ ಬ್ಯಾಟರಿ ತಂತ್ರಜ್ಞಾನದ ಬಳಕೆ ಲಾಭದಾಯಕವಾಗಿ ಕಾಣಿಸುತ್ತಿಲ್ಲ. ಹಾಗಾಗಿ, ಬ್ಯಾಟರಿಯಲ್ಲಿ ಕೆಲ ಸುಧಾರಣೆ ಮಾಡಲಾಗುತ್ತಿದೆ. ಇದೇ ವೇಳೆ ಜಲಜನಕ ಇಂಧನಪೂರಿತ ವಾಹನಗಳ ಮೇಲೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಫ್ ತಿಳಿಸಿದ್ದಾರೆ.
ಜಲಜನಕ ಇಂಧನ ಬಳಕೆಯ ಟ್ರಕ್ ಸಂಚಾರಕ್ಕೆ ಚಾಲನೆ
Published by Jyoti Angadi
06 ಮಾರ್ಚ್ 2025