* ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 1 ಲಕ್ಷಕ್ಕೆ 12.4 ಆಗಿದ್ದು,ಭಾರತದಲ್ಲಿಇದುವರೆಗಿನ ಗರಿಷ್ಟವಾಗಿದೆ. ಭಾರತದಲ್ಲಿ 2022 ರಲ್ಲಿ 1.71 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಏಪ್ರಿಲ್ ನಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಅಂಕಿ-ಅಂಶದಲ್ಲಿ ವರದಿ ಮಾಡಿದೆ.
* 2022 ರ ಸಮಯದಲ್ಲಿ ಆತ್ಮಹತ್ಯೆಗಳು 2018 ಕ್ಕೆ ಹೋಲಿಸಿದರೆ 27% ರಷ್ಟು ಹೆಚ್ಚಾಗಿದೆ ಮತ್ತು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳನ್ನು ವರದಿ ಮಾಡಿದೆ.
* 1990ರಲ್ಲಿ ಮಹಿಳೆಯರಲ್ಲಿ 25.3% ರಿಂದ 2016 ರಲ್ಲಿ 36.6% ಕ್ಕೆ ಮತ್ತು ಪುರುಷರಲ್ಲಿ 18.7% ರಿಂದ 24.3% ಕ್ಕೆ ಏರಿತು.
* ಖಿನ್ನತೆ, ಉದ್ಯೋಗ, ಆರ್ಥಿಕ, ಸಂಬಂಧ ಹಾಗೂ ಆರೋಗ್ಯ ಕುರಿತ ಸಮಸ್ಯೆಗಳ ಒತ್ತಡದಿಂದಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ನವದೆಹಲಿ ಗಂಗಾರಾಂ ಆಸ್ಪತ್ರೆಯ ಸೈಕಿಯಾಟ್ರಿ ಆ್ಯಂಡ್ ಬಿಹೇವಿಯರಲ್ ಸೈನ್ಸ್ ಸಂಸ್ಥೆ ಉಪಾಧ್ಯಕ್ಷ ರಾಜೀವ್ ಮೆಹ್ರಾ ತಿಳಿಸಿದ್ದಾರೆ.
* ಭಾರತದಲ್ಲಿ ಆತ್ಮಹತ್ಯೆ ಯುವಕರಲ್ಲಿ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಒಂಟಿತನ ಕೂಡ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಸೈಕಿಯಾಟ್ರಿಸ್ಟ್ ಶ್ಯಾಂ ಭಟ್ ತಿಳಿಸಿದ್ದಾರೆ.
* ಯಾವ ವ್ಯಕ್ತಿಯಾದರೂ ಮಂಕಾಗಿದ್ದರೆ, ಇಲ್ಲವೇ ಖಿನ್ನತೆಯಿಂದ ಬಳಲುತ್ತಿದ್ದರೆ ಅವರನ್ನು ಹುರಿದುಂಬಿಸಿ. ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಬಲ್ಲ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅವರನ್ನು ಉತ್ತೇಜಿಸಿ ಎಂದು ಸೈಕಿಯಾಟ್ರಿಸ್ಟ್ ಶ್ಯಾಂ ಭಟ್ ಅವರು ತಿಳಿಸಿದ್ದಾರೆ.
ಜಗತ್ತಿನಲ್ಲೇ ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲು
Published by Jyoti Angadi
12 ಜುಲೈ 2024