* ಜಾಗತಿಕ ಅಭಿವೃದ್ದಿಗೆ ಪ್ರತಿ ರಾಷ್ಟ್ರ ನೀಡುವ ಕೊಡುಗೆ ಎಷ್ಟಿದೆ ಎಂಬುದನ್ನು ಅಳೆಯುವ ಪ್ರಮುಖ ಅಂತರರಾಷ್ಟ್ರೀಯ ಸೂಚ್ಯಂಕವಾಗಿರುವುದು Commitment to Development Index (CDI). ಇದನ್ನು Centre for Global Development (CGD) ಎಂಬ ಸ್ವತಂತ್ರ ಸಂಶೋಧನಾ ಸಂಸ್ಥೆ ಪ್ರಕಟಿಸುತ್ತದೆ. CDI 2025 ರ ವರದಿ ವಿಶ್ವದ 36 ಪ್ರಮುಖ ದೇಶಗಳ ನೀತಿಗಳನ್ನು ವಿಶ್ಲೇಷಿಸಿ ಪ್ರಕಟಿಸಿದೆ.
* ಈ ವರ್ಷ ಬಿಡುಗಡೆಗೊಂಡ CDI 2025 ರ ರ‍್ಯಾಂಕಿಂಗ್‌ನಲ್ಲಿ ಭಾರತ ಒಟ್ಟು 36 ದೇಶಗಳಲ್ಲಿ 36ನೇ ಸ್ಥಾನ ಪಡೆದಿದೆ.
ವೈಶ್ವಿಕ ಅಭಿವೃದ್ದಿ ಮತ್ತು ಸಹಕಾರದ ಕ್ಷೇತ್ರದಲ್ಲಿ ಭಾರತ ಹಲವು ಜಾಗತಿಕ ಪ್ರಯತ್ನಗಳನ್ನು ಮಾಡುತ್ತಿದ್ದರೂ CDI ಯ ಮಾಪನ ಕ್ರಮದ ಪ್ರಕಾರ ಭಾರತ ಇನ್ನೂ ಹೆಚ್ಚಿನ ಸುಧಾರಣೆಯನ್ನು ಮಾಡಬೇಕಿದೆ.
CDI ಯಲ್ಲಿ ದೇಶಗಳ ಅಭಿವೃದ್ದಿ ಕೊಡುಗೆಯನ್ನು ಕೆಳಗಿನ 7 ವಿಭಾಗಗಳ ಆಧಾರದ ಮೇಲೆ ಅಳೆಯಲಾಗುತ್ತದೆ:
- ವ್ಯಾಪಾರ (Trade) : 1. ಅಭಿವೃದ್ಧಿಶೀಲ ರಾಷ್ಟ್ರಗಳ ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಲಾಗಿದೆಯೇ? 2. ಮಾರುಕಟ್ಟೆ ಪ್ರವೇಶ ಅವಕಾಶಗಳನ್ನು ಎಷ್ಟು ತೆರೆಯಲಾಗಿದೆ?
ಭಾರತದ ವ್ಯಾಪಾರ ನೀತಿಗಳು ಹಲವು ಸುಂಕ ಮತ್ತು ನಿಬಂಧನೆಗಳನ್ನು ಹೊಂದಿರುವುದರಿಂದ ಈ ವಿಭಾಗದಲ್ಲಿ ಅಂಕಗಳು ಕಡಿಮೆ.
- ಹೂಡಿಕೆ (Investment) : 1. ವಿದೇಶಿ ಹೂಡಿಕೆಗಳಿಗೆ ಅವಕಾಶಗಳೇನು? 2. ಕಂಪನಿಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜವಾಬ್ದಾರಿಯುತ ಹೂಡಿಕೆ ಮಾಡುತ್ತಿದ್ದಾರೆಯೇ?
ಭಾರತ ಕೆಲವು ನಿರ್ಬಂಧಗಳನ್ನು ಹೊಂದಿರುವುದರಿಂದ ಈ ವಿಭಾಗವೂ ಬಹುಶಃ ಕಡಿಮೆ ಅಂಕ ಪಡೆದಿದೆ.
- ವಲಸೆ (Migration): 1. ವಿದೇಶಿ ಪ್ರತಿಭೆಯನ್ನು ಸ್ವೀಕರಿಸುವುದು, ಅವಕಾಶ ನೀಡುವುದು. 2. ಆಶ್ರಯಾರ್ಥಿಗಳಿಗೆ ನೀಡುವ ಅವಕಾಶಗಳು.
ಭಾರತ ವಲಸೆ ನೀತಿಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಹೊಂದಿರುವುದರಿಂದ ಅಂಕ ಕಡಿಮೆ.
- ಪರಿಸರ (Environment) : 1.ಕಾರ್ಬನ್ ಇಮ್ಮಿಷನ್ ಕಡಿತ 2. ನವೀಕರಿಸಬಹುದಾದ ಶಕ್ತಿ ಉತ್ತೇಜನ 3. ಹವಾಮಾನ ಬದಲಾವಣೆ ನೀತಿಗಳು
ಭಾರತ ಪರಿಸರ ಕಾರ್ಯಗಳಲ್ಲಿ ಮುಂದುವರೆದಿದ್ದರೂ, ಅಭಿವೃದ್ಧಿಶೀಲ ರಾಷ್ಟ್ರಗಳ ಮಾನದಂಡಕ್ಕೆ ಹೋಲಿಸಿದರೆ ಸುಧಾರಣೆಗೆ ಅವಕಾಶವಿದೆ.
- ಸುರಕ್ಷತೆ (Security) : 1. ಯುಎನ್ ಶಾಂತಿ ಪಡೆಗೆ ನೀಡಿರುವ ಸಹಕಾರ 2. ಜಾಗತಿಕ ಭದ್ರತೆಯಲ್ಲಿ ಪಾತ್ರ
ಭಾರತ ಯುಎನ್ ಶಾಂತಿ ಪಡೆಗೆ ದೊಡ್ಡ ಕೊಡುಗೆ ನೀಡಿದರೂ, CDI ಯ ಇತರ ಭದ್ರತಾ ಮಾನದಂಡಗಳ ಪ್ರಕಾರ ಮಧ್ಯಮ ಮಟ್ಟದ ಅಂಕವಿದೆ.
- ತಂತ್ರಜ್ಞಾನ (Technology) : 1.ತಂತ್ರಜ್ಞಾನ ಹಂಚಿಕೆ 2. ಅಭಿವೃದ್ದಿಶೀಲ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ
ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ದಿಗ್ಗಜವಾದರೂ ಜಾಗತಿಕ ಸಹಕಾರದ ದೃಷ್ಟಿಯಿಂದ CDN ಮಾನದಂಡಕ್ಕೆ ಪ್ರಕಾರ ಮಧ್ಯಮ ಅಂಕ.
- ಅಭಿವೃದ್ಧಿ ನೆರವು (Aid): 1. ಬಡ ರಾಷ್ಟ್ರಗಳಿಗೆ ನೀಡುವ ನೆರವು 2. ಮಾನವೀಯ ಸಹಾಯ 3.ಅಂತರರಾಷ್ಟ್ರೀಯ ದಾನ
ಭಾರತ ನೆರವು ನೀಡಿದರೂ, ಅಭಿವೃದ್ಧಿಶೀಲ ರಾಷ್ಟ್ರಗಳಷ್ಟಾಗಿ ದೊಡ್ಡ ಮೊತ್ತದ ನೆರವಿಲ್ಲ.
CDI ಯ ಮುಖ್ಯ ಗುರಿಗಳು:
✔ ಜಗತ್ತಿನ ಪ್ರತಿಯೊಂದು ದೇಶವೂ ವಿಶ್ವ ಅಭಿವೃದ್ದಿಗೆ ಹೇಗೆ ಕೊಡುಗೆ ಕೊಡುತ್ತದೆ ಎಂಬುದನ್ನು ಅಳೆಯುವುದು
✔ ನೀತಿಗಳ ಜಾಗತಿಕ ಪರಿಣಾಮವನ್ನು ವಿಶ್ಲೇಷಿಸುವುದು
✔ ಅಭಿವೃದ್ಧಿ, ಭದ್ರತೆ, ಪರಿಸರ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ರಾಷ್ಟ್ರಗಳನ್ನು ಉತ್ತೇಜಿಸುವುದು
✔ ಜಾಗತಿಕ ಸಹಕಾರ ಮತ್ತು ಜವಾಬ್ದಾರಿತ್ವವನ್ನು ಹೆಚ್ಚಿಸುವುದು
ಬುಧವಾರ, 26 ನವೆಂಬರ್ 2025
1:12 ಅಪರಾಹ್ನ
Daily PDF
ಜಗತ್ತಿನ ಅಭಿವೃದ್ಧಿ ಸೂಚ್ಯಂಕ 2025: ರಾಷ್ಟ್ರಗಳ ಜವಾಬ್ದಾರಿತ್ವದ ಮೌಲ್ಯಮಾಪನ
Authored by:
Akshata Halli