➤ ಭಾರತದ ಪ್ರಮುಖ ನಗರಗಳ ಸಾರಿಗೆ, ಆರೋಗ್ಯ ಮತ್ತು ಕೃಷಿ ವಲಯದ ಸುಧಾರಣೆಗಾಗಿ ಜಪಾನ್ ಸರ್ಕಾರವು ಸುಮಾರು ₹16,420 ಕೋಟಿ (275.858 ಬಿಲಿಯನ್ ಯೆನ್) ಅಧಿಕೃತ ಅಭಿವೃದ್ಧಿ ಸಹಾಯ (ODA) ಸಾಲವನ್ನು ಘೋಷಿಸಿದೆ. ಈ ಕುರಿತು ಭಾರತ ಸರ್ಕಾರ ಮತ್ತು ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ (JICA) ನಡುವೆ ಮಾರ್ಚ್ 24, 2026 ರಂದು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಸಾಲದ ಮೊತ್ತವನ್ನು ಕರ್ನಾಟಕ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳ ಪ್ರಮುಖ ನಾಲ್ಕು ಯೋಜನೆಗಳಿಗೆ ಬಳಸಲಾಗುವುದು.
➤ ಜಪಾನ್ ನೀಡುತ್ತಿರುವ ಈ ಬೃಹತ್ ಸಾಲದ ಮೊತ್ತವನ್ನು ಈ ಕೆಳಗಿನ ನಾಲ್ಕು ಪ್ರಮುಖ ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ:
1.ಬೆಂಗಳೂರು ಮೆಟ್ರೋ ರೈಲು ಯೋಜನೆ (ಹಂತ-3): ಇದಕ್ಕೆ ಸುಮಾರು ₹6,100 ಕೋಟಿ (102.480 ಬಿಲಿಯನ್ ಯೆನ್) ಮೀಸಲಿಡಲಾಗಿದೆ. ಇದು ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಲಿದೆ.
2.ಮುಂಬೈ ಮೆಟ್ರೋ ಲೈನ್ 11: ಇದಕ್ಕೆ 92.400 ಬಿಲಿಯನ್ ಯೆನ್ ಸಾಲ ನೀಡಲಾಗಿದೆ.
3.ಮಹಾರಾಷ್ಟ್ರದ ಆರೋಗ್ಯ ಸೇವೆ ಬಲಪಡಿಸುವ ಯೋಜನೆ: ತೃತೀಯ ಹಂತದ ಆರೋಗ್ಯ ಸೇವೆ, ವೈದ್ಯಕೀಯ ಮತ್ತು ನರ್ಸಿಂಗ್ ಶಿಕ್ಷಣದ ಗುಣಮಟ್ಟ ಸುಧಾರಿಸಲು 62.294 ಬಿಲಿಯನ್ ಯೆನ್ ಹಂಚಿಕೆ ಮಾಡಲಾಗಿದೆ.
4.ಪಂಜಾಬ್ ಸುಸ್ಥಿರ ತೋಟಗಾರಿಕೆ ಉತ್ತೇಜನ: ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ತರಲು 18.684 ಬಿಲಿಯನ್ ಯೆನ್ ಸಾಲ ನೀಡಲಾಗಿದೆ.
➤ ಬೆಂಗಳೂರು ಮೆಟ್ರೋ ಹಂತ-3 (Namma Metro Phase-3): ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಹಂತ-3ರ ಮೆಟ್ರೋ ಯೋಜನೆ ವರದಾನವಾಗಲಿದೆ.
ವ್ಯಾಪ್ತಿ: ಇದು ಸುಮಾರು 44.65 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದ್ದು, ಒಟ್ಟು 31 ನಿಲ್ದಾಣಗಳನ್ನು ಒಳಗೊಂಡಿದೆ.
ಪ್ರಮುಖ ಕಾರಿಡಾರ್‌ಗಳು: ಜೆ.ಪಿ ನಗರದಿಂದ ಕೆಂಪಾಪುರ (ಹೊರ ವರ್ತುಲ ರಸ್ತೆ) ಮತ್ತು ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಈ ಹಂತದಲ್ಲಿ ಕಾಮಗಾರಿ ನಡೆಯಲಿದೆ.
ಲಾಭ: ಇದು ನಗರದ ಪರಿಸರ ಸುಧಾರಣೆ, ವಾಯು ಮಾಲಿನ್ಯ ಕಡಿತ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ದೊಡ್ಡ ವೇಗ ನೀಡಲಿದೆ.
➤ ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆಯು (JICA) ಭಾರತಕ್ಕೆ ನೀಡುತ್ತಿರುವ ಈ ಬೃಹತ್ ಸಾಲದ ಮೊತ್ತಕ್ಕೆ ವಾರ್ಷಿಕ ಶೇಕಡಾ 2.7 ರಿಂದ 2.9 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಲಾಗಿದ್ದು, ಒಟ್ಟು 30 ವರ್ಷಗಳ ಮರುಪಾವತಿ ಅವಧಿಯಲ್ಲಿ ಆರಂಭಿಕ 10 ವರ್ಷಗಳ ರಿಯಾಯಿತಿ ಅವಧಿಯ (Grace Period) ಸೌಲಭ್ಯವನ್ನೂ ಒಳಗೊಂಡಿದೆ.
ಶನಿವಾರ, 28 ಮಾರ್ಚ್ 2026
10:27 ಪೂರ್ವಾಹ್ನ
Daily PDF
ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಜಪಾನ್ನಿಂದ ₹16,420 ಕೋಟಿ ಸಾಲ: ಬೆಂಗಳೂರು ಮೆಟ್ರೋಗೆ ದೊಡ್ಡ ನೆರವು
Authored by:
Akshata Halli