* ರಾಜ್ಯದಲ್ಲಿ ಎರಡನೇ ಬಾರಿಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಬಾರಿ ವಿದ್ಯುತ್ ಮೀಟರ್ ಆಧರಿಸಿ ಮನೆಪಟ್ಟಿ ಸಿದ್ಧಪಡಿಸಿ, ಜಿಯೋ ಟ್ಯಾಗಿಂಗ್ ಮೂಲಕ ಮನೆ-ಮನೆಗೆ ತಲುಪುವ ಕ್ರಮ ಕೈಗೊಳ್ಳಲಾಗಿದೆ.
* ಇದು ದೇಶದಲ್ಲೇ ಮೊದಲ ಪ್ರಯೋಗವಾಗಲಿದೆ. ರಾಜ್ಯದಲ್ಲಿ ಅಂದಾಜು 2 ಕೋಟಿ ಮನೆಗಳನ್ನು ಗುರುತಿಸಿ, ಸಮೀಕ್ಷೆಗೆ ಸ್ಟಿಕರ್ ಅಂಟಿಸುವ ಕಾರ್ಯ ನಡೆಯುತ್ತಿದೆ.
* ಹಿಂದಿನ ಸಮೀಕ್ಷೆ ನಡೆದಿದ್ದು 10 ವರ್ಷಗಳ ಹಿಂದೆ. ಅದರಿಂದಾಗಿ ರಾಜ್ಯ ಸರ್ಕಾರವು ಈಗ ಹೊಸ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.
* ಎಲ್ಲಾ ಜನರನ್ನು ವೈಜ್ಞಾನಿಕ ರೀತಿಯಲ್ಲಿ ಒಳಪಡಿಸಲು ಸುಧಾರಿತ ತಂತ್ರಜ್ಞಾನ ಬಳಸಲಾಗುತ್ತಿದೆ. ಸಮೀಕ್ಷೆಗೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ (ಅ.10ರವರೆಗೆ ವಿಸ್ತರಣೆ ಸಾಧ್ಯ) ಅವಧಿ ನಿಗದಿಯಾಗಿದೆ.
* 2011ರ ಜನಗಣತಿ ಪಟ್ಟಿ ಅಥವಾ ಮತದಾರರ ಪಟ್ಟಿಯ ಬದಲು, ಈ ಬಾರಿ ವಿದ್ಯುತ್ ಸಂಪರ್ಕವನ್ನು ಆಧಾರವನ್ನಾಗಿ ತೆಗೆದುಕೊಳ್ಳಲಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ದೇಶದಲ್ಲೇ ಪ್ರಥಮ ಸ್ಥಾನವಿದೆ.
* ಪ್ರಶ್ನಾವಳಿ ಪಟ್ಟಿ ಸೆಪ್ಟೆಂಬರ್ 6ರೊಳಗೆ ಬಹುತೇಕ ಅಂತಿಮವಾಗಲಿದೆ. ಸಮೀಕ್ಷೆ ಸಮಯದಲ್ಲಿ ಸಾರ್ವಜನಿಕರು ತೋರಬೇಕಾದ ದಾಖಲೆ ವಿವರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. ಇದರಿಂದ ಸಮೀಕ್ಷಕರು ತಕ್ಷಣ ದತ್ತಾಂಶ ಸಂಗ್ರಹಿಸಲು ಅನುಕೂಲವಾಗಲಿದೆ.
ಜಾತಿಗಣತಿಗೆ ಜಿಯೋ ಟ್ಯಾಗ್ ನೂತನ ಪ್ರಯೋಗ
Published by Jyoti Angadi
06 ಸೆಪ್ಟೆಂಬರ್ 2025