* ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸಂಸ್ಥಾಪಕ ಮತ್ತು ಜಾರ್ಖಂಡ್ ರಾಜ್ಯ ನಿರ್ಮಾಣದ ಪ್ರಮುಖ ಮುಖಂಡ ಶಿಬು ಸೊರೇನ್ (81) ಅವರು ಸೋಮವಾರ(ಆಗಸ್ಟ್ 04) ನಿಧನರಾದರು.
* ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಒಂದು ತಿಂಗಳಿನಿಂದ ನವದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸೋಮವಾರ ಬೆಳಿಗ್ಗೆ 8.56ಕ್ಕೆ ಕೊನೆಯುಸಿರೆಳೆದರು.
* ಮೃತದೇಹವನ್ನು ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾಂಚಿಗೆ ಕರೆತರಲಾಯಿತು. ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು. ಮಂಗಳವಾರ, ಹುಟ್ಟೂರಾದ ರಾಮಗಢ ಜಿಲ್ಲೆಯ ನೆಮ್ರಾ ಗ್ರಾಮದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.
* ಜಾರ್ಖಂಡ್ ವಿಧಾನಸಭೆಯು ಶಿಬು ಸೊರೇನ್ ನಿಧನದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಮೂರು ದಿನಗಳ ಶೋಕಾಚರಣೆ ಘೋಷಿಸಲಾಯಿತು. ರಾಜ್ಯಸಭೆಯು ಕೂಡ ಸಂತಾಪ ಸೂಚಿಸಿ, ದಿನದ ಉಳಿದ ಭಾಗದ ಕಾರ್ಯವೈಖರಿಯನ್ನು ಮುಂದೂಡಿತು.
* 2008 ರಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದದ ವೇಳೆ, ಜೆಎಂಎಂ ಪಕ್ಷದ ಬೆಂಬಲ ನಿರ್ಣಾಯಕವಾಗಿತ್ತು. ಅವಿಶ್ವಾಸ ಮತದಾನದ ಕೆಲದಿನಗಳ ಮುನ್ನ ಶಿಬು ಸೊರೇನ್ ಮತ್ತು ಜೆಎಂಎಂ ಸಂಸದರು ಅಜ್ಞಾತವಾಗಿ ಇದ್ದರು.
* ಮತದಾನದ ಹಿಂದಿನ ದಿನ ದೆಹಲಿಯಲ್ಲಿ ಅವರು ಕಾಣಿಸಿಕೊಂಡು ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು. ಇದರಿಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಉಳಿಯಲು ಸಾಧ್ಯವಾಯಿತು.
ಜಾರ್ಖಂಡ್ ಮಾಜಿ ಮುಖ್ಯ ಶಿಬು ಸೊರೇನ್ ವಿಧಿವಶ
Published by Jyoti Angadi
05 ಆಗಸ್ಟ್ 2025