* ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆ ಸೂಚ್ಯಂಕ (GSER) ವರದಿಯಲ್ಲಿ ಬೆಂಗಳೂರು ಮಹಾನಗರವು ತನ್ನ ಸ್ಥಾನವನ್ನು 21ರಿಂದ 14ಕ್ಕೆ ಹೆಚ್ಚಿಸಿಕೊಂಡಿದೆ.
* ಈ ಸಾಧನೆಯ ಮಾಹಿತಿಯನ್ನು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿವಾ ಟೆಕ್ನಾಲಜಿ (ವಿವಾಟೆಕ್) ಸಮಾವೇಶದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ. ಅವರು ಈ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
* ಬುದ್ಧಿಮತ್ತೆಯ ಶಕ್ತಿ ಆಧರಿಸಿ ಈ ರ‍್ಯಾಂಕಿಂಗ್ ನೀಡಲಾಗುತ್ತದೆ. ಬೆಂಗಳೂರು ನವೋದ್ಯಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಬೆಳವಣಿಗೆ ಸಾಧಿಸಿರುವುದರಿಂದ ‘ಉದಯೋನ್ಮುಖ ತಾರೆ’ ಆಗಿ ಗುರುತಿಸಲಾಗಿದೆ.
* ಪ್ಯಾರಿಸ್ (12), ಫಿಲಡಲ್ಫಿಯಾ (13) ಮತ್ತು ಸಿಯಾಟೆಲ್ (15) ನಗರಗಳ ಜೊತೆ ಸಮಾನ ಮಟ್ಟದಲ್ಲಿ ಬೆಂಗಳೂರು ಸ್ಪರ್ಧಿಸುತ್ತಿದೆ.
* ಇದೇ ವೇಳೆ ಡೀಪ್ ಟೆಕ್ ಮತ್ತು ಎಐ ಕ್ಷೇತ್ರದಲ್ಲಿಯೂ ಬೆಂಗಳೂರು ಉನ್ನತ ಸಾಧನೆ ಮಾಡಿದ್ದು, ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾ ವಿಭಾಗದಲ್ಲಿ 5ನೇ ಸ್ಥಾನ ಪಡೆದಿದೆ.
ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ
Published by Akshata Halli
13 ಜೂನ್ 2025