* 2025 ರ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (GII) ಭಾರತವು ಜಾಗತಿಕವಾಗಿ 38ನೇ ಸ್ಥಾನ ಪಡೆದುಕೊಂಡಿದೆ. 2020 ರಲ್ಲಿ 48 ನೇ ಸ್ಥಾನದಿಂದ ಇದು ನಿರಂತರ ಸುಧಾರಣೆ ಕಂಡಿದೆ.
* ಕಡಿಮೆ-ಮಧ್ಯಮ ಆದಾಯದ ಆರ್ಥಿಕತೆಗಳಲ್ಲಿ ಮತ್ತು ದಕ್ಷಿಣ-ಮಧ್ಯ ಏಷ್ಯಾ ಪ್ರದೇಶದಲ್ಲಿ ಭಾರತ 1ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಸ್ವಿಟ್ಜರ್ಲೆಂಡ್, ಸ್ವೀಡನ್ ಮತ್ತು ಅಮೆರಿಕಾ ಮೊದಲ ಮೂರು ಸ್ಥಾನಗಳಲ್ಲಿ ಇದ್ದರೆ, ಚೀನಾ 10ನೇ ಸ್ಥಾನದಲ್ಲಿದೆ.
* ವಿಶ್ವ ಬೌದ್ಧಿಕ ಸ್ವತ್ತು ಸಂಸ್ಥೆ (WIPO) ಪ್ರಕಟಿಸಿದ ಈ ವರದಿ 139 ದೇಶಗಳು ಮತ್ತು ಅಗ್ರ 100 ನಾವೀನ್ಯತೆ ಗುಂಪುಗಳ ವಿಶ್ಲೇಷಣೆಯನ್ನು ಒಳಗೊಂಡಿದೆ.
* ದಶಕದಷ್ಟು ವೇಗದ R&D ವೆಚ್ಚ ಮತ್ತು ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಬೆಳವಣಿಗೆಯ ನಂತರ, ಪ್ರಸ್ತುತ ಜಾಗತಿಕವಾಗಿ ಬೆಳವಣಿಗೆ ಮಂದಗತಿಯಾಗಿರುವ ಹಂತದಲ್ಲಿ ಇದು ಬಿಡುಗಡೆಯಾಗಿದೆ.
* ಮಧ್ಯಮ ಆದಾಯದ ಆರ್ಥಿಕ ವ್ಯವಸ್ಥೆಗಳು ಆವಿಷ್ಕಾರದಲ್ಲಿ ಬಲವಾಗಿ ಹೊರಹೊಮ್ಮುತ್ತಿವೆ. ಚೀನಾ, ಭಾರತ, ಟರ್ಕಿಯೆ, ವಿಯೆಟ್ನಾಂ ನಿರಂತರ ಸುಧಾರಣೆ ಸಾಧಿಸುತ್ತಿರುವರೆ, ಸೆನೆಗಲ್, ಟುನೀಶಿಯಾ, ಉಜ್ಬೇಕಿಸ್ತಾನ್, ರುವಾಂಡಾ ಮುಂತಾದ ದೇಶಗಳು ಚುರುಕು ನಾವೀನ್ಯತೆ ರಾಷ್ಟ್ರಗಳಾಗಿ ಬೆಳೆಯುತ್ತಿವೆ.
* GII ತಂತ್ರಜ್ಞಾನ, ವ್ಯಾಪಾರ ಮಾದರಿ, ಸಾಮಾಜಿಕ ಉಪಕ್ರಮಗಳು ಹಾಗೂ ವ್ಯವಸ್ಥಾತ್ಮಕ ಬದಲಾವಣೆಗಳನ್ನು ಸಮಗ್ರವಾಗಿ ಪರಿಶೀಲಿಸುತ್ತದೆ.
* ಹೂಡಿಕೆ, ತಂತ್ರಜ್ಞಾನ ಪ್ರಗತಿ, ಅಳವಡಿಕೆ ದರಗಳು ಮತ್ತು ಸಮಾಜದ ಮೇಲೆ ಅದರ ಪರಿಣಾಮಗಳನ್ನು ಗಮನಿಸಿ, ಜಾಗತಿಕ ಆವಿಷ್ಕಾರ ಪ್ರವೃತ್ತಿಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.
2025 ರಲ್ಲಿ ಅತ್ಯಂತ ನಾವೀನ್ಯತೆ ದೇಶಗಳ ಟಾಪ್ 10 ಪಟ್ಟಿ:
         ದೇಶ                    ಜಿಐಐ ಅಂಕ (GII Score)
1   ಸ್ವಿಟ್ಜರ್ಲ್ಯಾಂಡ್                   66
2   ಸ್ವೀಡನ್                               62.6
3   ಅಮೆರಿಕ                              61.7
4   ಕೊರಿಯಾ ಗಣರಾಜ್ಯ          60
5   ಸಿಂಗಪುರ್                           59.8
6   ಯುನೈಟೆಡ್ ಕಿಂಗ್‌ಡಮ್   59.1
7   ಫಿನ್ಲ್ಯಾಂಡ್                        57.7
8   ನೆದರ್‌ಲ್ಯಾಂಡ್ಸ್                 57
9   ಡೆನ್ಮಾರ್ಕ್                          56.9
10   ಚೀನಾ                              56.6