* 'ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ (ಸ್ಟಾರ್ಟ್‌ಅಪ್) ಹೊಂದಿರುವ ದೇಶಗಳ ಪೈಕಿ ಭಾರತವು ಮೂರನೇ ಸ್ಥಾನ ಪಡೆದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
* ಭಾರತ ಮಂಟಪಂನಲ್ಲಿ ಮಾರ್ಚ್ 20 ರಂದು ನಡೆದ 'ಸ್ಟಾರ್ಟ್‌ಅಪ್ ಮಹಾಕುಂಭ'ದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ನವೋದ್ಯಮ (ಸ್ಟಾರ್ಟ್‌ಅಪ್) ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ ಮೂರನೇ ಸ್ಥಾನ ಪಾಲಿದೆ ಎಂದು ಹೇಳಿದ್ದಾರೆ.
* 'ದೇಶದಲ್ಲಿ 2014ರ ವೇಳೆ ಕೇವಲ 100 ನವೋದ್ಯಮಗಳಿದ್ದವು. ಪ್ರಸ್ತತ ಭಾರತದಲ್ಲಿ 1.25 ಲಕ್ಷ ನವೋದ್ಯಮಳಿವೆ. ಈ ಪೈಕಿ ಶೇ 45ರಷ್ಟು ಮಹಿಳೆಯರು ಮುನ್ನಡೆಸುತ್ತಿದ್ದಾರೆ.
* ಜಾಗತಿಕ ಮಟ್ಟದಲ್ಲಿ ಸೆಮಿಕಂಡೆಕ್ಟರ್, ಕೃತಕ ಬುದ್ದಿಮತ್ತೆಗಳಿಗೆ ಕೇಂದ್ರ ಸರಕಾರ ಚಾಲನೆಯನ್ನು ನೀಡಿದೆ ಇದರಿಂದಾಗಿ ಬಂಡವಾಳ ಹೂಡಲು ಜಾಗತಿಕ ಹೂಡಿಕೆದಾರರಿಗೆ ನೆರವಾಗಲಿದೆ.
* ಒಂದು ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ (ಅಂದಾಜು ₹8,300 ಕೋಟಿ) ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ 110 ನವೋದ್ಯಮ ಕಂಪನಿಗಳಿವೆ (ಯೂನಿಕಾರ್ನ್).
ಗುರುವಾರ, 21 ಮಾರ್ಚ್ 2024
3:55 ಅಪರಾಹ್ನ
Daily PDF
ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ 3ನೇ ಸ್ಥಾನ
Authored by:
Akshata Halli