* ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.4ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ಮೂರು ತ್ರೈಮಾಸಿಕಗಳಿಗಿಂತ ಉತ್ತಮವಾಗಿದ್ದು, ನಿರೀಕ್ಷೆಗೂ ಮೀರಿ ಬೆಳವಣಿಗೆ ಸಾಧಿಸಿದೆ.
* 2024-25ರ ಹಣಕಾಸು ವರ್ಷದಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ.6.5ರಷ್ಟಿದೆ. ಇದು ಕೋವಿಡ್ ನಂತರದ ಅವಧಿಯಲ್ಲಿ ದಾಖಲಾಗಿರುವ ಅತಿ ಕಡಿಮೆ ಬೆಳವಣಿಗೆ ದರವಾಗಿದೆ.
* ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಹಿರಿಮೆಯನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಈ ದರ ಶೇ.9.2ರಷ್ಟಿತ್ತು.
* ಜಾಗತಿಕ ಅನಿಶ್ಚಿತತೆಗಳಿಂದ ಖಾಸಗಿ ಹೂಡಿಕೆ ಕಡಿಮೆಯಾಗಿದ್ದರೂ, ಗ್ರಾಮೀಣ ಬೇಡಿಕೆಯು ಹೆಚ್ಚಾಗಿದ್ದು ಬೆಳವಣಿಗೆಯು ಸರಾಸರಿ ಅಂದಾಜಿನೊಳಗೆ ಇದೆ.
* ಕೃಷಿ, ತಯಾರಿಕೆ, ನಿರ್ಮಾಣ, ಕೈಗಾರಿಕೆ ಮುಂತಾದ ವಲಯಗಳಲ್ಲಿ ಏರಿಕೆಯು ಕಂಡುಬಂದಿದ್ದು, ಜಿಡಿಪಿ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.
* ರಷ್ಯಾ-ಉಕ್ರೇನ್ ಯುದ್ಧ, ಟ್ರಂಪ್ ಸುಂಕ ನೀತಿ ಬದಲಾವಣೆ ಹಾಗೂ ಜಾಗತಿಕ ಮಾರುಕಟ್ಟೆ ಪುನರ್ನಿಮಾಣದ ನಡುವೆಯೂ, ಗ್ರಾಮೀಣ ಬೇಡಿಕೆ, ಉತ್ತಮ ಮುಂಗಾರು ಇಳುವರಿ ಮತ್ತು ಸರಕಾರಿ ವೆಚ್ಚದ ಜತೆಗೆ ದೇಶದ ಆರ್ಥಿಕ ಬೆಳವಣಿಗೆಯು ಚುರುಕುಗೊಂಡಿದೆ.
ಜಾಗತಿಕ ಅನಿಶ್ಚಿತತೆ ಮಧ್ಯೆ ಭಾರತದಲ್ಲಿ ಶೇ.7.4 ಜಿಡಿಪಿ ಏರಿಕೆ :
Published by Jyoti Angadi
02 ಜೂನ್ 2025