* ಫುಟ್ಬಾಲ್ ಅಂಗಳದಲ್ಲಿ ದಾಖಲೆಗಳನ್ನು ಬರೆಯುತ್ತಿದ್ದ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಸಾಮಾಜಿಕ ಮಾಧ್ಯಮದಲ್ಲೂ ದಾಖಲೆಗಳ ಶಿಖರವನ್ನೇರಿದ್ದಾರೆ.
* 1 ಕೋಟಿ ಫಾಲೋವರ್ಸ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗಿರುವ ಈ ಕಾಲದಲ್ಲಿ ರೊನಾಲ್ಡೊ ಬರೋಬ್ಬರಿ 1 ಬಿಲಿಯನ್ ಅಂದರೆ 100 ಕೋಟಿ ಅನುಯಾಯಿಗಳನ್ನು ಹೊಂದಿರುವ ವಿಶ್ವದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
* ಜಗತ್ತಿನಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸುವ ಮೂಲಕ ತಮ್ಮ ಅಪ್ರತಿಮ ಜಾಗತಿಕ ಆಕರ್ಷಣೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
* ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ 638 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದು ಎಕ್ಸ್‌ನಲ್ಲಿ 113 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅವರನ್ನು ಅನುಸರಿಸುತ್ತಾರೆ. ರೊನಾಲ್ಡೊ ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಚಂದಾದಾರರನ್ನು ಮತ್ತು ಯೂಟ್ಯೂಬ್‌ನಲ್ಲಿ 60 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.
* ಇತ್ತೀಚಿಗೆ ರೊನಾಲ್ಡೊ ಯೂಟ್ಯೂಬ್ ಚಾನೆಲ್ ಪ್ರಾರಾಂಭಿಸಿದರು. ಅದರ ಚಂದಾದಾರರ ಸಂಖ್ಯೆ ಮೊದಲ ದಿನದಲ್ಲಿ 15 ಮಿಲಿಯನ್ ದಾಟಿದ್ದು. ಒಂದೇ ವಾರದಲ್ಲಿ ಈ ಸಂಖ್ಯೆ 50 ಮಿಲಿಯನ್ ತಲುಪಿತು.
ಶನಿವಾರ, 14 ಸೆಪ್ಟೆಂಬರ್ 2024
12:08 ಅಪರಾಹ್ನ
Daily PDF
ಇತಿಹಾಸ ಸೃಷ್ಟಿಸಿದ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೋ ರೊನಾಲ್ಡೊ: 100 ಕೋಟಿ ಫಾಲೋವರ್ಸ್..!
Authored by:
Jyoti Angadi