* ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್ ಫೌಂಡೇಶನ್ Chandrayaan-3 mission: ಬಾಹ್ಯಾಕಾಶ ಪರಿಶೋಧನೆಯ ಸಾಧ್ಯತೆಯನ್ನು ಹೆಚ್ಚಿಸುವಲ್ಲಿ ಚಂದ್ರಯಾನದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಚಂದ್ರಯಾನ-3 ಮಿಷನ್ ನಡೆಸಲಾಗಿತ್ತು.
* ಈ ಪ್ರಶಸ್ತಿಯನ್ನು ಸ್ಪೇಸ್ ಫೌಂಡೇಶನ್ ನೀಡಲಾಗುತ್ತಿದ್ದು, US-ಆಧಾರಿತ ಬಾಹ್ಯಾಕಾಶ ಪ್ರತಿಷ್ಠಾನದಿಂದ ಬಾಹ್ಯಾಕಾಶ ಪರಿಶೋಧನೆಗಾಗಿ 2024 ಜಾನ್ L. "ಜಾಕ್" ಸ್ವಿಗರ್ಟ್, ಜೂನಿಯರ್ ಪ್ರಶಸ್ತಿಯನ್ನು ನೀಡಿದೆ.
* ಈ ಸಾಧನೆಯನ್ನು ಸಾಧಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿತ್ತು. ನಂತರ ಚಂದ್ರಯಾನ 3ರ ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಸೈಟ್ ಅನ್ನು ʼಶಿವಶಕ್ತಿʼ ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು ಘೋಷಿಸಿದ್ದರು.
* ಕೊಲೊರಾಡೋದಲ್ಲಿ ವಾರ್ಷಿಕ ಬಾಹ್ಯಾಕಾಶ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ನೀಡಲಾದ ಪ್ರಶಸ್ತಿಯನ್ನು ಇಸ್ರೋ ಪರವಾಗಿ ಹ್ಯೂಸ್ಟನ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಿಸಿ ಮಂಜುನಾಥ್ ಅವರು ಸ್ವೀಕರಿಸಿದರು.
* ಈ ಪ್ರಶಸ್ತಿಯು ಗಗನಯಾತ್ರಿ ಜಾನ್ L. "ಜ್ಯಾಕ್" ಸ್ವಿಗರ್ಟ್ ಜೂನಿಯರ್ ಅವರ ಗೌರವಾರ್ಥ ಸ್ಥಾಪಿಸಲ್ಪಟ್ಟಿದೆ. ಅವರ ಕೊಡುಗೆಗಳು "ಸ್ಪೇಸ್ ಫೌಂಡೇಶನ್" ಸ್ಥಾಪನೆಗೆ ಸ್ಫೂರ್ತಿ ನೀಡಿವೆ.
* ಕೊಲೊರಾಡೋ ಮೂಲದ ಸ್ವಿಗರ್ಟ್, ನಿವೃತ್ತ US ನೌಕಾಪಡೆಯ ಕ್ಯಾಪ್ಟನ್ ಜೇಮ್ಸ್ A. ಲೊವೆಲ್ ಜೂನಿಯರ್ ಮತ್ತು ಫ್ರೆಡ್ ಹೈಸ್ ಜೊತೆಗೆ ಅಪೊಲೊ 13 ಚಂದ್ರನ ಕಾರ್ಯಾಚರಣೆಯ ಭಾಗವಾಗಿದ್ದರು.
ಗುರುವಾರ, 11 ಎಪ್ರಿಲ್ 2024
7:04 ಪೂರ್ವಾಹ್ನ
Daily PDF
ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್ ಫೌಂಡೇಶನ್
Authored by:
Akshata Halli