* ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್, ಇಸ್ರೋದ GSAT-N2 ಸ್ಯಾಟಲೈಟ್ ಕಮ್ಯೂನಿಕೇಶನ್ ಉಪಗ್ರಹ ಉಡಾವಣೆ ಮಾಡಿದೆ.
* ಫ್ಲೋರಿಡಾದ ಕೆನವರಲ್ ಸ್ಪೇಸ್ ಫೋರ್ಸ್ ನಿಲ್ದಾಣದಿಂದ ಭಾರತದ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಇಸ್ರೋ ಹಾಗೂ ಸ್ಪೇಸ್ ಎಕ್ಸ್‌ನ ಮೊದಲ ಜಂಟಿ ಉಪಗ್ರಹ ಉಡಾವಣೆಯಾಗಿದೆ.
* ಮಸ್ಕ್ ಅವರ ಏಜೆನ್ಸಿ ಸ್ಪೇಸ್‌ಎಕ್ಸ್ 34 ನಿಮಿಷಗಳ ಪ್ರಯಾಣದ ನಂತರ ಇಸ್ರೋದ ಉಪಗ್ರಹವನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಸಾಗಿಸಿತು. ಇದು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನ 396 ನೇ ಹಾರಾಟವಾಗಿರುವುದು ಗಮನಾರ್ಹವಾಗಿದೆ.
* GSAT-N2 ಉಪಗ್ರಹವನ್ನು ಇಸ್ರೋ ಸ್ಯಾಟಲೈಟ್ ಸೆಂಟರ್ ಹಾಗೂ ಲಿಕ್ವಿಡ್ ಪ್ರಪಲ್ಶನ್ ಸಿಸ್ಟಮ್ ಸೆಂಟರ್ ಅಭಿವೃದ್ಧಿಪಡಿಸಿದೆ. ಇದು 48 Gbps ಡೇಟಾ ಟ್ರಾನ್ಸ್‌ಮಿಶನ್ ಸಾಮರ್ಥ್ಯ ಹೊಂದಿದೆ. ಇದು ಬ್ರಾಂಡ್‌ಬ್ಯಾಂಡ್ ಕನೆಕ್ಷನ್ ಮತ್ತಷ್ಟು ವಿಸ್ತರಿಸಲಿದೆ.
* ಈ ಉಪಗ್ರಹ ದೇಶಾದ್ಯಂತ ಇನ್ ಫ್ಲೈಟ್ ಇಂಟರ್ನೆಟ್ ಸೇವೆ ಒದಗಿಸಲಿದೆ. ವಿಮಾನದಲ್ಲಿ ಪ್ರಯಾಣಿಸುವಾಗ ವೈಫೈ ಸೇರಿದಂತೆ ಇಂಟರ್ನೆಟ್ ಸಂಪರ್ಕ ಸುಲಭವಾಗಿ ಸಿಗಲಿದೆ.
* ಉಡಾವಣೆ ಮಾಡಿರುವ ಉಪಗ್ರಹ 14 ವರ್ಷ ಕಾರ್ಯನಿರ್ವಹಿಸಲಿದೆ. ಉಹಗ್ರಹ ವಿವಿದ ಸ್ಪಾಟ್ ಬೀಮ್ ಬಳಕೆ ಮಾಡಿದೆ. ಇದರಿಂದ ಬ್ರಾಂಡ್‌ಬ್ಯಾಂಡ್ ಸೇವೆಗಳು ಪರಿಣಾಮಕಾರಿಯಾಗಿ ಲಭಿಸಲಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ಉಪಗ್ರಹ ಉಡಾವಣೆ ಮಾಡಿದ ಸ್ಪೇಸ್ ಎಕ್ಸ್!
Published by Jyoti Angadi
19 ನವೆಂಬರ್ 2024