* ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಾಣವಾಗಿದೆ. ಭಾರತದ ಮಹತ್ವಾಕಾಂಕ್ಷೆಯ 'ಆದಿತ್ಯ ಎಲ್1' ವೀಕ್ಷಣಾಲಯವು ಅಂತರಿಕ್ಷದಲ್ಲಿ ನಿಗದಿತ ತಾಣ ಲಗ್ರಾಂಜ್ 1 ಪಾಯಿಂಟ್‌ಗೆ ಜನವರಿ 6, 2024 ರಂದು ತಲುಪಿದೆ.
* 'ಆದಿತ್ಯ ಎಲ್1 ಸುತ್ತ ಪರಿಭ್ರಮಿಸಲಿರುವ ಹ್ಯಾಲೊ ಆರ್ಬಿಟ್ ಗೆ ಸೇರಿಸುವ ಕಾರ್ಯವನ್ನು ಇಸ್ರೋ ಕೈಗೊಳ್ಳುತ್ತಿದೆ. 126 ದಿನಗಳ ಬಳಿಕ 'ಆದಿತ್ಯ ಎಲ್1' ನೌಕೆ ತನ್ನ ಗಮ್ಯ ತಲುಪಿದೆ.
* ಆದಿತ್ಯ-L1 ಮಿಷನ್ ಲಾಗ್ರಾಂಜಿಯನ್ ಪಾಯಿಂಟ್ ನಲ್ಲಿರುವ ಭಾರತೀಯ ಸೌರ ವೀಕ್ಷಣಾಲಯವಾಗಿದ್ದು, "ಸೂರ್ಯನ ವರ್ಣಗೋಳ ಮತ್ತು ಕರೋನಲ್ ಡೈನಾಮಿಕ್ಸ್ ಅನ್ನು ನಿರಂತರವಾಗಿ ಗಮನಿಸುವುದು ಮತ್ತು ಅರ್ಥಮಾಡಿಕೊಳ್ಳುವುದು". ಆದಿತ್ಯ-L1 ಅನ್ನು L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸುವುದು ಕಡಿಮೆ ಭೂಮಿಯ ಕಕ್ಷೆಯಲ್ಲಿ (LEO) ಇರಿಸುವುದಕ್ಕೆ ಹೋಲಿಸಿದರೆ ಪ್ರಯೋಜನಗಳನ್ನು ಹೊಂದಿದೆ.
* 7 ವೈಜ್ಞಾನಿಕ ಪ್ಲೇ ಲೋಡ್‍ಗಳನ್ನ ಒಳಗೊಂಡಿರುವ ಉಪಗ್ರಹ ಸೂರ್ಯನ ಪ್ರಭಾಗೋಲ (ಫೋಟೋಸ್ಪೇರ್), ವರ್ಣಗೋಲ (ಕ್ರೋಮಾಸ್ಪೇರ್) ಸೂರ್ಯನ ಹೊರ ಮೇಲ್ಮೈ ಅನ್ನು ಅಧ್ಯಯನ ನಡೆಸಲಿದ್ದು, ಲಕ್ಷಾಂತರ ಕಿ.ಮೀ. ದೂರದಲ್ಲಿರುವ ಎಲ್-1 ಬಿಂದು ಸೂರ್ಯನ ನಿರಂತರ ಅಧ್ಯಯನಕ್ಕೆ ಸೂಕ್ತ ತಾಣವಾಗಿದೆ.
* ಗ್ರಹಣ ಸೂರ್ಯಾಸ್ತ ಮುಕ್ತ ಬಿಂದುವಿನಲ್ಲಿ ಪ್ರತಿಷ್ಠಾಪನೆಗೊಳ್ಳುವ ಆದಿತ್ಯ ಎಲ್-1 ವರ್ಷಪೂರ್ತಿ ಮತ್ತು ದಿನದ 24 ಗಂಟೆ ಕಾಲ ಸೂರ್ಯ ಅಧ್ಯಯನ ನಡೆಸಲಿದೆ.
* ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C57) 2023 ರ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (SDSC) ಎರಡನೇ ಉಡಾವಣಾ ಕೇಂದ್ರದಿಂದ ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತು.
* ಆದಿತ್ಯ-L1 ಬಾಹ್ಯಾಕಾಶ ನೌಕೆಯ ವೀಕ್ಷಣಾಲಯದ ಪ್ರಯಾಣದ ಹಾದಿ :
- ಸೆಪ್ಟೆಂಬರ್ 2,2023 : ಇಸ್ರೋ ದಿಂದ ಆದಿತ್ಯ-L1 ಹೊತ್ತ ಪಿ.ಎಸ್,ಎಲ್.ವಿ -ಸಿ 57 ಉಡಾವಣೆ.
- ಸೆಪ್ಟೆಂಬರ್ 5-15, 2023: ನಾಲ್ಕು ಹಂತದಲ್ಲಿ ಕಕ್ಷೆಯ ವಿವಿಧ ಹಂತಕ್ಕೆ ತಲುಪಿಸುವ ಕಾರ್ಯ ಸೇರ್ಪಡೆ.
- ಸೆಪ್ಟೆಂಬರ್.18,2023: ಆದಿತ್ಯ ಎಲ್1ನಿಂದ ವೈಜ್ಞಾನಿಕ ಅಂಕಿ ಅಂಶ ಸಂಗ್ರಹಣ ಕಾರ್ಯ ಆರಂಭ.
- ಸೆಪ್ಟೆಂಬರ್.30,2023: ಭೂಮಿಯ ಗುರುತ್ವಾಕರ್ಷಣೆ ವಲಯದಿಂದ ಬೇರ್ಪಟ್ಟು ಭೂಮಿ-ಸೂರ್ಯನ ಲಗ್ರಾಂಜ್ ಪಾಯಿಂಟ್1 ನತ್ತ ಚಲನೆ.
- ಅಕ್ಟೋಬರ್.6,2023: 16 ಸೆಕೆಂಡ್‌ಗಳ ಅವಧಿಯಲ್ಲಿ ವೀಕ್ಷಣಾಲಯದ ಚಲನೆಯ ಪಥ ಸರಿಪಡಿಸುವ ಕಾರ್ಯ ಯಶಸ್ವಿ.
- ನವೆಂಬರ್.7,2023: ಹೆಲಿಯೊಸ್ ಪೇಲೋಡ್‌ನಿಂದ ಮೊದಲ ಬಾಇಗೆ ಹೈ ಎನರ್ಜಿಯ ಎಕ್ಸ್‌ರೇ ದೃಶ್ಯಾವಳಿ
- ಡಿಸೆಂಬರ್.1,2023: ಆ್ಯಸ್ಪೆಕ್ಸ್ ಪೇಲೋಡ್‌ನಲ್ಲಿದ್ದ ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟೋಮೀಟರ್ ಕಾರ್ಯಾರಂಭ
- ಡಿಸೆಂಬರ್.10,2023: ಎಸ್‌ಯುಐಟಿ ಪೇಲೋಡ್‌ನಿಂದ ಸೂರ್ಯನ ಪೂರ್ಣಮುದ್ರಿಕೆಯ ಚಿತ್ರದ ಸೆರೆ.
- ಜನವರಿ .6,2024: ಲಗ್ರಾಂಜ್ 1 ನೆಲೆ ತಲುಪಿಸಿದ ಅದಿತ್ಯ ಎಲ್1 ವೀಕ್ಷಣಾಲಯ.
ಸೋಮವಾರ, 08 ಜನವರಿ 2024
1:52 ಅಪರಾಹ್ನ
Daily PDF
ಇಸ್ರೋ ಮಿಷನ್ ಯಶಸ್ವಿ: ಲಗ್ರಾಂಜ್ 1 ಪಾಯಿಂಟ್ ತಲಿಪಿದ ಆದಿತ್ಯ ಎಲ್-1 ನೌಕೆ
Authored by:
Bhagya R K