➤ 'ಡಾರ್ಕ್ ಪ್ಯಾಟರ್ನ್ಸ್' (Dark Patterns): ಸರಳವಾಗಿ ಹೇಳುವುದಾದರೆ, ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಆಪ್‌ಗಳಲ್ಲಿ ಗ್ರಾಹಕರಿಗೆ ತಿಳಿಯದಂತೆ ಅವರ ನಿರ್ಧಾರಗಳನ್ನು ತಮಗೆ ಬೇಕಾದಂತೆ ಕುಶಲತೆಯಿಂದ ನಿಯಂತ್ರಿಸುವ ವಿನ್ಯಾಸ ಅಥವಾ ತಂತ್ರಗಳನ್ನೇ 'ಡಾರ್ಕ್ ಪ್ಯಾಟರ್ನ್ಸ್' ಎನ್ನಲಾಗುತ್ತದೆ.
➤ ವಿಮಾ ವಲಯದಲ್ಲಿ ಡಾರ್ಕ್ ಪ್ಯಾಟರ್ನ್ಸ್‌ನ ಪ್ರಮುಖ ಉದಾಹರಣೆಗಳು:
- ಹೆಚ್ಚುವರಿ ಮಾಹಿತಿ ಬೇಡಿಕೆ: ಗ್ರಾಹಕರು ಕೇವಲ ಪಾಲಿಸಿ ವಿವರ ಅಥವಾ ಪ್ರೀಮಿಯಂ ದರ ನೋಡಲು ಹೋದರೂ ಅವರ ಫೋನ್ ನಂಬರ್, ಇಮೇಲ್‌ನಂತಹ ವೈಯಕ್ತಿಕ ಮಾಹಿತಿಗಳನ್ನು ಕಡ್ಡಾಯವಾಗಿ ಕೇಳುವುದು.
- ಹಿಡನ್ ಚಾರ್ಜಸ್ (Grounded Hiding): ಪಾಲಿಸಿಯ ಅಸಲಿ ನಿಯಮಗಳು ಮತ್ತು ಗುಪ್ತ ಶುಲ್ಕಗಳನ್ನು (Hidden Charges) ಸಂಕೀರ್ಣ ಪ್ರಕ್ರಿಯೆಗಳ ಹಿಂದೆ ಮುಚ್ಚಿಡುವುದು.
- ಬಲವಂತದ ಆಯ್ಕೆಗಳು (Forced Action): ಪ್ರೀಮಿಯಂ ಪಾವತಿಸುವಾಗ ಗ್ರಾಹಕರಿಗೆ ಗೊತ್ತಿಲ್ಲದಂತೆ ಬೇರೆ ಆಡ್-ಆನ್ (Add-on) ಉತ್ಪನ್ನಗಳನ್ನು ಆಟೋಮ್ಯಾಟಿಕ್ ಆಗಿ ಆಯ್ದುಕೊಳ್ಳುವಂತೆ ಮಾಡುವುದು.
- ರದ್ದತಿ ಕಷ್ಟಕರವಾಗಿಸುವುದು: ಒಮ್ಮೆ ಖರೀದಿಸಿದ ಪಾಲಿಸಿಯನ್ನು ಕ್ಯಾನ್ಸಲ್ ಮಾಡುವುದನ್ನು ಅತ್ಯಂತ ಸಂಕೀರ್ಣಗೊಳಿಸುವುದು.
- ಸ್ಪ್ಯಾಮ್ ಕರೆಗಳ ಕಿರಿಕಿರಿ: ಗ್ರಾಹಕರ ಇಷ್ಟವಿಲ್ಲದಿದ್ದರೂ ಪದೇ ಪದೇ ಪ್ರಚಾರದ ಕರೆಗಳು ಹಾಗೂ ಸಂದೇಶಗಳನ್ನು ಕಳುಹಿಸಿ ಒತ್ತಡ ಹೇರುವುದು.
- IPAI ಜೊತೆ ಒಪ್ಪಂದ: ವಿಮಾ ವಲಯದ ಡಾರ್ಕ್ ಪ್ಯಾಟರ್ನ್ಸ್‌ಗಳ ಮೇಲ್ವಿಚಾರಣೆಗೆ IRDAI ಸಂಸ್ಥೆಯು IPAI ಜೊತೆ 9 ತಿಂಗಳ ಒಪ್ಪಂದ ಮಾಡಿಕೊಂಡಿದೆ.
- ಸ್ವಯಂ ಮೌಲ್ಯಮಾಪನ ವಿಫಲ: ಕಂಪನಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದ ಕಾರಣ, IRDAI ಈಗ ಸ್ವತಂತ್ರ ಸಂಸ್ಥೆಯ ಮೂಲಕ ಆಡಿಟ್ ನಡೆಸಲು ಮುಂದಾಗಿದೆ.
- ಆರ್‌ಬಿಐ ಮಾದರಿ ಅನುಸರಣೆ: ಬ್ಯಾಂಕಿಂಗ್ ವಲಯದಲ್ಲಿ ಆರ್‌ಬಿಐ ತಂದಿರುವ ನಿಯಮಗಳ ಮಾದರಿಯಲ್ಲೇ, ವಿಮಾ ವಲಯದಲ್ಲೂ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದೆ.
ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ