* ‘ಇನ್‌ವೆಸ್ಟ್ ಕರ್ನಾಟಕ–2025’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇಂದು (ಫೆಬ್ರುವರಿ.11) ಆರಂಭವಾಗುತ್ತಿದೆ. ಕರ್ನಾಟಕವನ್ನು ಬಂಡವಾಳ ಹೂಡಿಕೆಯ ಶಕ್ತಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದ ಸೌಲಭ್ಯಗಳನ್ನು ವಿಶ್ವಕ್ಕೆ ಪರಿಚಯಿಸುವುದು ಇದರ ಉದ್ದೇಶವಾಗಿದೆ.
* 19 ದೇಶಗಳ ಖ್ಯಾತ ಉದ್ಯಮಿಗಳು ಹಾಗೂ ಪ್ರತಿನಿಧಿಗಳ ಭಾಗವಹಿಸುವಿಕೆಯಿಂದ ₹10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಾಧ್ಯತೆಯ ನಿರೀಕ್ಷೆಯಿದೆ.
* ಉದ್ದಿಮೆ, ನೀತಿ ಮತ್ತು ನಾವೀನ್ಯತೆ ಕ್ಷೇತ್ರದ ದಿಗ್ಗಜರು ಸಮಾವೇಶದಲ್ಲಿ ಸೇರಿ, ಕರ್ನಾಟಕದ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ಕುರಿತು ಚರ್ಚಿಸಲಿದ್ದಾರೆ.
* ಸಮಾವೇಶದಿಂದ ರಾಜ್ಯದಲ್ಲಿ ಉದ್ಯಮದ ಸಂಶೋಧನೆ, ಸಹಯೋಗ ಮತ್ತು ತಯಾರಿಕಾ ಚಟುವಟಿಕೆಗಳು ವಿಸ್ತಾರಗೊಳ್ಳಲಿವೆ. ಇದರ ಮುಖ್ಯ ಧ್ಯೇಯ ‘ಪ್ರಗತಿಯ ಮರುಪರಿಕಲ್ಪನೆ’ವಾಗಿದೆ.
* ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಪ್ರಕಾರ, ತಂತ್ರಜ್ಞಾನ ಆಧಾರಿತ, ಪರಿಸರಸ್ನೇಹಿ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆ ಈ ಸಮಾವೇಶದಲ್ಲಿ ಪ್ರತಿಬಿಂಬಿಸಲಿದ್ದು, ಸಮಾವೇಶದ ಬಳಿಕ ಕರ್ನಾಟಕದ ಭವಿಷ್ಯ ಹೊಸ ದಿಕ್ಕಿನತ್ತ ಸಾಗಲಿದೆ.
* 2025-30ನೇ ಸಾಲಿನ ನೂತನ ಕೈಗಾರಿಕಾ ನೀತಿ ಬಿಡುಗಡೆಗೊಂಡಿದ್ದು, ತ್ವರಿತ ಅನುಮೋದನೆಗಾಗಿ ಏಕಗವಾಕ್ಷಿ ಪೋರ್ಟಲ್ ಆರಂಭಿಸಲಾಯಿತು ಹಾಗೂ 60ಕ್ಕೂ ಹೆಚ್ಚು ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶಿಸಿದವು.
* ಪರಿಸರಸ್ನೇಹಿ ವಿದ್ಯುತ್ ವಾಹನಗಳು, ಜೈವಿಕ ತಂತ್ರಜ್ಞಾನ, ಮತ್ತು ನಿಖರ ಬಿಡಿಭಾಗ ತಯಾರಿಕೆಯಲ್ಲಿ ಬೆಳವಣಿಗೆ ವೇಗ ಪಡೆಯಲಿದೆ. ರಾಜ್ಯದ ಎಂಎಸ್‌ಇ ಮತ್ತು ನವೋದ್ಯಮಗಳಿಗೆ ಉತ್ತೇಜನ ಸಿಗಲಿದೆ. 2000ಕ್ಕೂ ಹೆಚ್ಚು ಎಸ್‌ಎಂಇಗಳಿಗೆ ಡಿಜಿಟಲೀಕರಣ ತರಬೇತಿ, 100 ಸಂಸ್ಥೆಗಳಿಗೆ ನೆರವು ಒದಗಿಸಲಾಗುತ್ತಿದೆ.
ಮಂಗಳವಾರ, 11 ಫೆಬ್ರುವರಿ 2025
1:17 ಅಪರಾಹ್ನ
Daily PDF
‘ಇನ್‌ವೆಸ್ಟ್ ಕರ್ನಾಟಕ–2025’ : ಹೂಡಿಕೆದಾರರ ಸಮಾವೇಶ
Authored by:
Jyoti Angadi