2026ರ ಧೇಯವಾಕ್ಯ (Theme): "Different Contexts, Common Aspirations" (ವಿಭಿನ್ನ ಹಿನ್ನೆಲೆಗಳು, ಒಂದೇ ಆಕಾಂಕ್ಷೆಗಳು)
➤ ಮೂರು ಉಪ-ಧೇಯಗಳು (Sub-themes):
-
- ಜಾಗತಿಕ ಒಗ್ಗಟ್ಟು (Global Solidarity): ಸಮಾನ ಅವಕಾಶ ಮತ್ತು ಸಂಪನ್ಮೂಲಗಳ ಹಂಚಿಕೆ.
- ಹಂಚಿಕೆಯ ಸವಾಲುಗಳು (Shared Challenges): ಹವಾಮಾನ ಬದಲಾವಣೆ, ನಿರುದ್ಯೋಗ ಮತ್ತು ಡಿಜಿಟಲ್ ಅಸಮಾನತೆ ಮೆಟ್ಟಿ ನಿಲ್ಲುವುದು.
- ಯುವ ಆವಿಷ್ಕಾರ (Youth Innovation): ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.
➤ ಕೇಂದ್ರ ಸರ್ಕಾರದ ಯೋಜನೆಗಳು:
- ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY): ಯುವಜನರಲ್ಲಿ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿ ಉದ್ಯೋಗಾವಕಾಶ ಕಲ್ಪಿಸುವುದು.
- ಮೈ ಭಾರತ್ (MY Bharat - Mera Yuva Bharat): ಯುವ ಶಕ್ತಿಯನ್ನು ದೇಶ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಲು ಆರಂಭಿಸಲಾದ ಸ್ವಾಯತ್ತ ವೇದಿಕೆ.
- ಜನರೇಶನ್ ಅನ್‌ಲಿಮಿಟೆಡ್ / ಯುವಾ (YuWaah): ಯೂನಿಸೆಫ್ (UNICEF) ಮತ್ತು ಭಾರತ ಸರ್ಕಾರದ ಜಂಟಿ ಉಪಕ್ರಮ.
➤ ಕರ್ನಾಟಕ ಸರ್ಕಾರದ ಯೋಜನೆಗಳು:
- ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ: ಗ್ರಾಮೀಣ ಯುವಕರಲ್ಲಿ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು.
- ಯುವನಿಧಿ ಯೋಜನೆ: ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಮಾಸಿಕ ಭತ್ಯೆ ನೀಡುವ ಗ್ಯಾರಂಟಿ ಯೋಜನೆ.
- ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC): ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗಾರ್ಹತೆ ಹೆಚ್ಚಿಸುವುದು.