➤ ವಿಶಾಖಪಟ್ಟಣ: "ಭಾರತೀಯ ನೌಕಾಪಡೆಯು ದೇಶದ ಕಡಲತೀರದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಮತ್ತು ಜಾಗತಿಕ ಸಮುದ್ರ ವಾಣಿಜ್ಯದ ಸ್ಥಿರತೆಗೆ ಕೊಡುಗೆ ನೀಡುವಲ್ಲಿ ಸದಾ ಜಾಗರೂಕವಾಗಿದೆ," ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಪಾದಿಸಿದ್ದಾರೆ. ಬುಧವಾರ (18-02-2026) ಆಂಧ್ರಪ್ರದೇಶದ ವಿಶಾಖಪಟ್ಟಣಂ ತೀರದಲ್ಲಿ ನಡೆದ ಪ್ರತಿಷ್ಠಿತ 'ಇಂಟರ್‌ನ್ಯಾಷನಲ್ ಫ್ಲೀಟ್ ರಿವ್ಯೂ' (IFR) ಕಾರ್ಯಕ್ರಮದಲ್ಲಿ ಯುದ್ಧನೌಕೆಯ ಮೇಲೆ ಸವಾರರಾಗಿ ಅವರು ನೌಕಾಪಡೆಯ ಶಕ್ತಿಯನ್ನು ಪರಿಶೀಲಿಸಿ ಮಾತನಾಡಿದರು.
➤ ವಿಶ್ವದ ವಿವಿಧ ರಾಷ್ಟ್ರಗಳ ನೌಕಾಪಡೆಗಳ ನಡುವಿನ ಪರಸ್ಪರ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ರಾಷ್ಟ್ರಪತಿಗಳು, ಭಾರತವು ಯಾವಾಗಲೂ ಸಾಮೂಹಿಕ ಜವಾಬ್ದಾರಿ ಮತ್ತು ಹಂಚಿಕೆಯ ಸಹಕಾರದಲ್ಲಿ ನಂಬಿಕೆ ಇಟ್ಟಿದೆ ಎಂದು ತಿಳಿಸಿದರು. ಜಗತ್ತಿನ ವಿವಿಧ ನೌಕಾಪಡೆಗಳೊಂದಿಗೆ ಸ್ನೇಹ ಮತ್ತು ನಂಬಿಕೆಯ ಸೇತುವೆಯನ್ನು ನಿರ್ಮಿಸಿರುವ ಭಾರತೀಯ ನೌಕಾಪಡೆಯು, ಜಾಗತಿಕ ಸಮುದ್ರ ವಾಣಿಜ್ಯಕ್ಕೆ ಅಡೆತಡೆಯಾಗದಂತೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಮೂಲಕ ಸಮುದ್ರದ ಸವಾಲುಗಳನ್ನು ಎದುರಿಸುವ ವಿಶ್ವಾಸಾರ್ಹ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತಿದೆ.
➤ ಇಂಟರ್‌ನ್ಯಾಷನಲ್ ಫ್ಲೀಟ್ ರಿವ್ಯೂ (IFR): ಇದು ನೌಕಾಪಡೆಯ ಶಕ್ತಿ ಪ್ರದರ್ಶನದ ಒಂದು ಭಾಗವಾಗಿದ್ದು, ಇದರಲ್ಲಿ ದೇಶದ ರಾಷ್ಟ್ರಪತಿಗಳು ನೌಕಾಪಡೆಯ ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಮತ್ತು ವಿಮಾನಗಳನ್ನು ಪರಿಶೀಲಿಸುತ್ತಾರೆ. ಇದು ರಾಷ್ಟ್ರದ ನೌಕಾ ಶಕ್ತಿಯನ್ನು ವಿಶ್ವಕ್ಕೆ ಪ್ರದರ್ಶಿಸುವುದಲ್ಲದೆ, ಸ್ನೇಹಪರ ರಾಷ್ಟ್ರಗಳ ನಡುವೆ ಸೌಹಾರ್ದತೆಯನ್ನು ವೃದ್ಧಿಸುತ್ತದೆ. ಸಮುದ್ರ ತೀರದ ರಕ್ಷಣೆಯ ಜೊತೆಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾ ರಾಜತಾಂತ್ರಿಕತೆಯನ್ನು (Defence Diplomacy) ಬಲಪಡಿಸಲು ಈ ಕಾರ್ಯಕ್ರಮ ಸಹಕಾರಿ.
➤ ಸುರಕ್ಷಾ ಸನ್ನದ್ಧತೆ: ಭಾರತದ ಸಮುದ್ರ ಗಡಿಯು ಸುಮಾರು 7,516 ಕಿ.ಮೀ ವಿಸ್ತಾರವಾಗಿದ್ದು, ಅದರ ರಕ್ಷಣೆಯ ಹೊಣೆ ನೌಕಾಪಡೆಯ ಮೇಲಿದೆ.
ಇಂತಹ ಮತ್ತಷ್ಟು ಪ್ರಚಲಿತ ವಿದ್ಯಮಾನಗಳ ಮಾಹಿತಿಗಾಗಿ KPSCVaani.com ಗೆ ಭೇಟಿ ನೀಡಿ.
ಗುರುವಾರ, 19 ಫೆಬ್ರುವರಿ 2026
1:37 ಅಪರಾಹ್ನ
Daily PDF
ವಿಶಾಖಪಟ್ಟಣದಲ್ಲಿ ಭವ್ಯ ನೌಕಾಪಡೆ ಪ್ರದರ್ಶನ – ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಂಸೆ
Authored by:
Akshata Halli