* ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಡೇವಿಡ್ ಲಾರೆನ್ಸ್ (61) ಭಾನುವಾರ(ಜೂನ್ 22) ಮೋಟರ್ ನ್ಯೂರಾನ್ ಕಾಯಿಲೆಯಿಂದಾಗಿ ನಿಧನರಾದರು. ಈ ಕಾಯಿಲೆಯು ದೇಹದ ಸ್ನಾಯುಗಳು, ಮಿದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.
* ಲಾರೆನ್ಸ್ ಅವರು ಇಂಗ್ಲೆಂಡ್ ತಂಡದಲ್ಲಿ ಆಡಿದ ಮೊದಲ ಕಪ್ಪು ಆಟಗಾರ ಎಂಬ ಗೌರವ ಪಡೆದಿದ್ದರು. 1988ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪ್ರವೇಶ ಪಡೆದ ಅವರು, 1991ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ ಪಡೆದು ಗಮನ ಸೆಳೆದರು.
* ಅವರು 5 ಟೆಸ್ಟ್ ಪಂದ್ಯಗಳಲ್ಲಿ 18 ವಿಕೆಟ್, ಹಾಗೂ 1 ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದುಕೊಂಡರು. ಒಟ್ಟು 185 ಪ್ರಥಮ ದರ್ಜೆ ಪಂದ್ಯಗಳಿಂದ 515 ವಿಕೆಟ್ ಗಳಿಸಿದರು.
* 2022ರಲ್ಲಿ ಲಾರೆನ್ಸ್ ಗ್ಲಾಸ್ಟರ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಕಪ್ಪು ನಾಯಕರಾಗಿದ್ದರು.
* ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಟಗಾರರು ಕಪ್ಪು ಪಟ್ಟಿಯನ್ನು ತೋಳಿಗೆ ಕಟ್ಟಿಕೊಂಡು ಗೌರವ ಸಲ್ಲಿಸಿದರು. ದಿನದಾಟಕ್ಕೆ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ ಡೇವಿಡ್ ಲಾರೆನ್ಸ್ ನಿಧನ
Published by Jyoti Angadi
23 ಜೂನ್ 2025