➤ ಅಧಿಕೃತ ನಾಮಕರಣಗೊಂಡ 27 ಸ್ಥಳಗಳ ವಿವರಣೆ:
- 21 ಭೂಪ್ರದೇಶಗಳು: ಪ್ರಮುಖ ಬೆಟ್ಟಗಳು, ಗ್ರಾಮಗಳು ಮತ್ತು ಪ್ರಾಂತ್ಯಗಳು.
- 4 ಪರ್ವತ ಕಣಿವೆಗಳು (Mountain Passes/Valleys): ಆಯಕಟ್ಟಿನ ಮಿಲಿಟರಿ/ಸಂಚಾರ ಮಾರ್ಗಗಳು.
- 1 ಹಿಮಸರೋವರ (Glacial Lake): ಹಿಮಾಲಯದ ಪ್ರದೇಶದಲ್ಲಿರುವ ಪ್ರಮುಖ ನೈಸರ್ಗಿಕ ಜಲಮೂಲ.
- 1 ಯುದ್ಧ ಸ್ಮಾರಕ: 1962ರ ಭಾರತ-ಚೀನಾ ಯುದ್ಧದ ವೀರ ಯೋಧರ ಸ್ಮಾರಕ.
- ಝಾಂಗ್ಲಾನ್' (Zangnan) ವಾದ: ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ಗೆ ಸೇರಿದ ಭೂಭಾಗವಾಗಿದ್ದು, ಅದನ್ನು ಚೀನಾ 'ಝಾಂಗ್ಲಾನ್' ಎಂದು ಕರೆಯುತ್ತದೆ.
- ಅಸ್ತಿತ್ವದ ನಿರಾಕರಣೆ: ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜಿಯಾಕುನ್ ಮಾತನಾಡಿ, "ಅರುಣಾಚಲ ಪ್ರದೇಶ ಎಂಬ ಅಸ್ತಿತ್ವವನ್ನೇ ನಾವು ಗುರುತಿಸುವುದಿಲ್ಲ. ಸ್ಥಳಗಳ ಹೆಸರು ಬದಲಾಯಿಸುವುದು ಅಕ್ರಮ ಹಾಗೂ ಇದು ಭಾರತದ ಸಾರ್ವಭೌಮತ್ವದ ಹಕ್ಕಾಗಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
- WMCC ಸಭೆಯ ಹಿನ್ನೆಲೆ: ಆಗಸ್ಟ್ 6ರಂದು ನವದೆಹಲಿಯಲ್ಲಿ ಭಾರತ ಮತ್ತು ಚೀನಾ ನಡುವೆ 36ನೇ ಗಡಿ ವ್ಯವಹಾರಗಳ ಸಮಾಲೋಚನಾ ಸಭೆ (WMCC - Working Mechanism for Consultation and Coordination) ನಡೆದ ಬೆನ್ನಲ್ಲೇ ಈ ಗಡಿ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ.
- ಅಖಂಡ ಭಾಗ: ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಹಾಗೂ ಅಖಂಡ ಅಂಗವಾಗಿದೆ (Integral and Inalienable Part of India).
- ಸಾರ್ವಭೌಮ ಹಕ್ಕು: ತನ್ನ ಭೌಗೋಳಿಕ ಗಡಿಯೊಳಗಿನ ಯಾವುದೇ ಸ್ಥಳಕ್ಕೆ ಹೆಸರು ನಿಗದಿಪಡಿಸುವುದು ಭಾರತದ ಪೂರ್ಣ ಕಾನೂನಾತ್ಮಕ ಮತ್ತು ಸಾರ್ವಭೌಮ ಹಕ್ಕಾಗಿದೆ.