➤ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿ ಬರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಇತ್ತೀಚೆಗೆ ಆಗಸ್ಟ್ 2026 ರ ನಿಯತಕಾಲಿಕ ಶ್ರಮಶಕ್ತಿ ಸಮೀಕ್ಷೆ (Periodic Labour Force Survey - PLFS) ವರದಿಯನ್ನು ಬಿಡುಗಡೆ ಮಾಡಿದೆ.
- ಒಟ್ಟಾರೆ LFPR ಏರಿಕೆ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಶ್ರಮಶಕ್ತಿ ಭಾಗವಹಿಸುವಿಕೆ ಪ್ರಮಾಣ (LFPR) ಆಗಸ್ಟ್ 2026 ರಲ್ಲಿ % 55.6 ಕ್ಕೆ ಏರಿಕೆಯಾಗಿದೆ (ಜುಲೈ 2026 ರಲ್ಲಿ ಇದು % 55.4 ಇತ್ತು).
- ಗ್ರಾಮೀಣ ಪ್ರದೇಶದಲ್ಲಿ ಸುಧಾರಣೆ: ಗ್ರಾಮೀಣ LFPR % 58.0 ರಿಂದ % 58.2 ಕ್ಕೆ ಏರಿಕೆಯಾಗಿದ್ದು, ವರದಿಯ ಶೇಕಡಾ ಏರಿಕೆಗೆ ಪ್ರಮುಖ ಕಾರಣವಾಗಿದೆ.
- ನಿರುದ್ಯೋಗ ದರ ಇಳಿಕೆ: ದೇಶದ ಒಟ್ಟಾರೆ ನಿರುದ್ಯೋಗ ದರ (Unemployment Rate) % 5.1 ರಿಂದ % 5.0 ಕ್ಕೆ ಕುಸಿದಿದೆ.
ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆ: ಮಹಿಳೆಯರ LFPR ಜುಲೈನಲ್ಲಿ % 34.4 ಇದ್ದು, ಆಗಸ್ಟ್‌ನಲ್ಲಿ % 34.8 ಕ್ಕೆ ಏರಿಕೆಯಾಗಿದೆ.
PLFS ಆಗಸ್ಟ್ 2026: ಪ್ರಮುಖ ಅಂಕಿ-ಅಂಶಗಳ ಕೋಷ್ಟಕ

ಶೋಚಕ / ನಿಯತಾಂಕ (Indicator) ಜುಲೈ 2026 ಆಗಸ್ಟ್ 2026 ವರ್ಷದಿಂದ ವರ್ಷಕ್ಕೆ ಬದಲಾವಣೆ (YoY)
ಒಟ್ಟಾರೆ LFPR 55.4% 55.6% +0.6% ಏರಿಕೆ
ಗ್ರಾಮೀಣ LFPR 58.0% 58.2% +1.2% ಏರಿಕೆ
ನಗರ LFPR 50.4% 50.4% ಬದಲಾವಣೆಯಿಲ್ಲ
ಉದ್ಯೋಗಿ ಜನಸಂಖ್ಯೆ ಅನುಪಾತ (WPR) 52.5% 52.8% ಮಾರ್ಚ್ 2026 ರ ನಂತರ ಅತಿ ಹೆಚ್ಚು
ಒಟ್ಟಾರೆ ನಿರುದ್ಯೋಗ ದರ (UR) 5.1% 5.0% ಇಳಿಕೆ
ಗ್ರಾಮೀಣ ನಿರುದ್ಯೋಗ ದರ (UR) 4.5% 4.1% ಜನವರಿ 2026 ರ ನಂತರ ಅತಿ ಕಡಿಮೆ

ಉದ್ಯೋಗಿ ಜನಸಂಖ್ಯೆ ಅನುಪಾತ (Worker Population Ratio - WPR): ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಉದ್ಯೋಗದಲ್ಲಿರುವವರ ಪ್ರಮಾಣವನ್ನು WPR ಸೂಚಿಸುತ್ತದೆ. ಆಗಸ್ಟ್ 2026 ರಲ್ಲಿ ಒಟ್ಟಾರೆ WPR % 52.8 ಕ್ಕೆ ತಲುಪಿದ್ದು, ಇದು ಮಾರ್ಚ್ 2026 ರ ನಂತರ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಗ್ರಾಮೀಣ ಭಾಗದಲ್ಲಿ WPR % 55.4 ರಿಂದ % 55.8 ಕ್ಕೆ ಹೆಚ್ಚಾಗಿದ್ದರೆ, ನಗರ ಭಾಗದಲ್ಲಿ % 47.0 ರಲ್ಲಿ ಸ್ಥಿರವಾಗಿದೆ.
ಇಳಿಕೆಯಾದ ಗ್ರಾಮೀಣ ನಿರುದ್ಯೋಗ: ಗ್ರಾಮೀಣ ಭಾಗದ ನಿರುದ್ಯೋಗ ದರವು ಜುಲೈನಲ್ಲಿದ್ದ % 4.5 ರಿಂದ ಆಗಸ್ಟ್‌ನಲ್ಲಿ % 4.1 ಕ್ಕೆ ಗಮನಾರ್ಹವಾಗಿ ಇಳಿಕೆಯಾಗಿದೆ. ಇದು 2026 ನೇ ಸಾಲಿನ ಜನವರಿ ತಿಂಗಳ ನಂತರ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಪುರುಷರ ನಿರುದ್ಯೋಗ ದರವು % 4.3 ಕ್ಕೆ ಮತ್ತು ಮಹಿಳೆಯರ ನಿರುದ್ಯೋಗ ದರವು % 3.9 ಕ್ಕೆ ಇಳಿಕೆಯಾಗಿದೆ.
ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆ (Female LFPR): ಮಹಿಳೆಯರ ಭಾಗವಹಿಸುವಿಕೆಯು ಸತತ ಎರಡನೇ ತಿಂಗಳು ಏರಿಕೆ ಕಂಡಿದೆ. ಗ್ರಾಮೀಣ ಮಹಿಳೆಯರ LFPR % 38.8 ರಿಂದ % 39.4 ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಮಹಿಳಾ LFPR ಅನ್ನು % 34.8 ಕ್ಕೆ ಹೆಚ್ಚಿಸಲು ನೆರವಾಗಿದೆ.