➤ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI - Telecom Regulatory Authority of India) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, 2026ರ ಜೂನ್ ಅಂತ್ಯಕ್ಕೆ ಭಾರತದಲ್ಲಿ ಒಟ್ಟು ಇಂಟರ್ನೆಟ್ ಚಂದಾದಾರರ (Internet Subscribers) ಸಂಖ್ಯೆಯು 1.11 ಬಿಲಿಯನ್ (111.41 ಕೋಟಿ) ಗಡಿ ದಾಟಿದೆ.
➤ TRAI ವರದಿಯ ಪ್ರಮುಖ ಮುಖ್ಯಾಂಶಗಳು :
1. ಒಟ್ಟು ಇಂಟರ್ನೆಟ್ ಬಳಕೆದಾರರು: 2026ರ ಮಾರ್ಚ್ ಅಂತ್ಯದಲ್ಲಿದ್ದ 1,092.79 ಮಿಲಿಯನ್‌ನಿಂದ (109.27 ಕೋಟಿ), ಜೂನ್ ಅಂತ್ಯಕ್ಕೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ 1.96% ರಷ್ಟು ಏರಿಕೆಯಾಗಿ 1,114.17 ಮಿಲಿಯನ್‌ಗೆ (111.41 ಕೋಟಿ) ತಲುಪಿದೆ.
2. ವೈರ್‌ಲೆಸ್ ಮತ್ತು ವೈರ್ಡ್ ಬಳಕೆದಾರರು:
  - ವೈರ್‌ಲೆಸ್ (Wireless) ಇಂಟರ್ನೆಟ್ ಚಂದಾದಾರರು: 1,066.43 ಮಿಲಿಯನ್
  - ವೈರ್ಡ್ (Wired/Broadband) ಇಂಟರ್ನೆಟ್ ಚಂದಾದಾರರು: 47.73 ಮಿಲಿಯನ್
3. ಬ್ರಾಂಡ್​ಬ್ಯಾಂಡ್ ಮತ್ತು ನ್ಯಾರೋಬ್ಯಾಂಡ್:
  - ಬ್ರಾಂಡ್‌ಬ್ಯಾಂಡ್ ಚಂದಾದಾರಿಕೆಗಳು 2.03% ರಷ್ಟು ಏರಿಕೆಯಾಗಿ 1,087.50 ಮಿಲಿಯನ್‌ಗೆ ತಲುಪಿದೆ.
  - ನ್ಯಾರೋಬ್ಯಾಂಡ್ ಚಂದಾದಾರಿಕೆಗಳು 0.89% ರಷ್ಟು ಕುಸಿದು 26.67 ಮಿಲಿಯನ್‌ಗೆ ಇಳಿದಿವೆ.
➤ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಂತರ (Urban-Rural Divide):
- ರಾಷ್ಟ್ರೀಯ ಸರಾಸರಿ: ದೇಶದಲ್ಲಿ ಪ್ರತಿ 100 ಜನರಿಗೆ 77.94 ಇಂಟರ್ನೆಟ್ ಚಂದಾದಾರರು ಇದ್ದಾರೆ (Internet Penetration Rate).
- ನಗರ ಪ್ರದೇಶಗಳು (Urban): ಪ್ರತಿ 100 ಜನರಿಗೆ 129.03 ಚಂದಾದಾರರಿದ್ದಾರೆ.
- ಗ್ರಾಮೀಣ ಪ್ರದೇಶಗಳು (Rural): ಪ್ರತಿ 100 ಜನರಿಗೆ ಕೇವಲ 49.07 ಚಂದಾದಾರರು ಮಾತ್ರ ಇದ್ದು, ಗ್ರಾಮೀಣ ಭಾಗದಲ್ಲಿ ಇನ್ನೂ ಡಿಜಿಟಲ್ ತಲುಪುವಿಕೆ ಹೆಚ್ಚಿಸಬೇಕಾದ ಅಗತ್ಯತೆಯನ್ನು ಇದು ತೋರಿಸುತ್ತದೆ.
➤ ಪೋಸ್ಟ್‌ಪೇಯ್ಡ್‌ಗಿಂತ ಪ್ರೀಪೇಯ್ಡ್ ARPU ಹೆಚ್ಚು: TRAI ವರದಿಯ ಪ್ರಕಾರ, ಬಳಕೆದಾರರಿಂದ ಬರುವ ಸರಾಸರಿ ಮಾಸಿಕ ಆದಾಯದಲ್ಲಿ (ARPU - Average Revenue Per User) ಪ್ರೀಪೇಯ್ಡ್ ಗ್ರಾಹಕರು ಮುಂದಿದ್ದಾರೆ:
- ಪ್ರೀಪೇಯ್ಡ್ (Pre-paid) ವಿಭಾಗದ ARPU: ಪ್ರತಿ ತಿಂಗಳಿಗೆ ರೂ. 200.72
- ಪೋಸ್ಟ್‌ಪೇಯ್ಡ್ (Post-paid) ವಿಭಾಗದ ARPU: ಪ್ರತಿ ತಿಂಗಳಿಗೆ ರೂ. 114.26(ಜೂನ್ 2026ಕ್ಕೆ ಮುಕ್ತಾಯಗೊಂಡ ತ್ರೈಮಾಸಿಕದ ಅಂಕಿಅಂಶ)