➤ 'ಶಬ್ದಲೋಕ' ಸಂಗ್ರಹಾಲಯದ ವಿಶೇಷತೆಗಳು:
- ಭಾಷಾ ಪರಂಪರೆಯ ಪ್ರದರ್ಶನ:ಭಾರತದ ಸುದೀರ್ಘ ಭಾಷಾ ಪರಂಪರೆ ಮತ್ತು ಭಾಷೆಗಳ ಐತಿಹಾಸಿಕ ವಿಕಸನವನ್ನು ಪ್ರದರ್ಶಿಸಲು ಈ ಸಂಗ್ರಹಾಲಯವನ್ನು ವಿನ್ಯಾಸಗೊಳಿಸಲಾಗಿದೆ.
- 380+ ಭಾಷೆಗಳ ಪ್ರದರ್ಶನ:ಇಲ್ಲಿ ದೇಶಾದ್ಯಂತ ಬಳಸಲಾಗುವ ಸುಮಾರು 380 ಭಾಷೆಗಳನ್ನು ವಿಭಿನ್ನ ವಸ್ತುಪ್ರದರ್ಶನಗಳು, ಕಲಾಕೃತಿಗಳು ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಮೂಲಕ ಪರಿಚಯಿಸಲಾಗಿದೆ.
- 2011ರ ಜನಗಣತಿಯ ಭಾಷೆಗಳು:2011ರ ಭಾರತೀಯ ಜನಗಣತಿಯಲ್ಲಿ (2011 Census of India) ದಾಖಲಾಗಿರುವ 121 ಪ್ರಮುಖ ಭಾಷೆಗಳಿಗೆ ಇಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ.
- 9 ಗ್ಯಾಲರಿಗಳು (Galleries):ಸಂಗ್ರಹಾಲಯವು ಒಟ್ಟು 9 ಪ್ರತ್ಯೇಕ ಗ್ಯಾಲರಿಗಳನ್ನು ಹೊಂದಿದ್ದು, ಭಾರತೀಯ ನಾಗರಿಕತೆ ಹಾಗೂ ಸಂಸ್ಕೃತಿಯಲ್ಲಿ ಭಾಷೆಯ ಪಾತ್ರವನ್ನು ಇವು ವಿವರಿಸುತ್ತವೆ.
- ಆಧುನಿಕ ತಂತ್ರಜ್ಞಾನದ ಬಳಕೆ:ಕೃತಕ ಬುದ್ಧಿಮತ್ತೆ (Artificial Intelligence - AI), ವರ್ಧಿತ ರಿಯಾಲಿಟಿ (Augmented Reality - AR), ವರ್ಚುವಲ್ ರಿಯಾಲಿಟಿ (VR), ಸ್ಪರ್ಶಸಂವೇದಿ ಪರದೆಗಳು (Interactive Touchscreens), ಹೊಲೋಗ್ರಾಮ್‌ಗಳು ಹಾಗೂ ಶ್ರವ್ಯ-ದೃಶ್ಯ ವ್ಯವಸ್ಥೆಗಳನ್ನು ಬಳಸಲಾಗಿದೆ.