➤ ಭಾರತೀಯ ಸೇನೆಯು ಸುಮಾರು 23,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ದಕ್ಷಿಣ ಕೊರಿಯಾದ ಹನ್ವಾ ಏರೋಸ್ಪೇಸ್ ತಂತ್ರಜ್ಞಾನದೊಂದಿಗೆ ಗುಜರಾತ್‌ನ ಎಲ್&ಟಿ ಪ್ಲಾಂಟ್‌ನಲ್ಲಿ ತಯಾರಾಗಲಿರುವ, 40 ಕಿ.ಮೀಗೂ ಹೆಚ್ಚು ದೂರದ ಗುರಿ ಧ್ವಂಸಗೊಳಿಸುವ ಸಾಮರ್ಥ್ಯದ 300 ಹೆಚ್ಚುವರಿ ‘K9 ವಜ್ರ’ ಫಿರಂಗಿಗಳನ್ನು ಖರೀದಿಸಲು ಯೋಜಿಸಿದೆ.
➤ K9 ವಜ್ರ ಫಿರಂಗಿಯ ಪ್ರಮುಖ ವೈಶಿಷ್ಟ್ಯಗಳು (Features of K9 Vajra):
- ಸ್ವಯಂ ಚಾಲಿತ ಸಾಮರ್ಥ್ಯ (Self-Propelled): ಸಾಮಾನ್ಯ ಫಿರಂಗಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಲು ಟ್ರ್ಯಾಕ್ಟರ್ ಅಥವಾ ಟ್ರಕ್‌ಗಳ ಸಹಾಯ ಬೇಕು. ಆದರೆ K9 ವಜ್ರವು ಟ್ಯಾಂಕ್‌ಗಳಂತೆ ತಾನಾಗಿಯೇ ಚಲಿಸುವ ಟ್ರ್ಯಾಕ್ಡ್ (Tracked) ವ್ಯವಸ್ಥೆಯನ್ನು ಹೊಂದಿದೆ.
- ಶೂಟ್ ಅಂಡ್ ಸ್ಕೂಟ್ (Shoot and Scoot): ಈ ಫಿರಂಗಿಯು ಗುರಿಯತ್ತ ಬಾಂಬ್ ದಾಳಿ ನಡೆಸಿ, ಶತ್ರು ಪಡೆಗಳು ತಿರುಗಿ ದಾಳಿ ಮಾಡುವ ಮುನ್ನವೇ ಅತ್ಯಂತ ವೇಗವಾಗಿ ತನ್ನ ಸ್ಥಳವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ.
- ರೇಂಜ್ ಮತ್ತು ಕ್ಯಾಲಿಬರ್: ಇದು 155mm/52-ಕ್ಯಾಲಿಬರ್ ಹೊಂದಿದ್ದು, 40 ಕಿ.ಮೀ ದೂರದಲ್ಲಿರುವ ಶತ್ರುಗಳ ನೆಲೆಗಳನ್ನು ನಿಖರವಾಗಿ ಧ್ವಂಸ ಮಾಡಬಲ್ಲದು.
- ಲಡಾಖ್‌ನಲ್ಲಿ ಯಶಸ್ವಿ ಪರೀಕ್ಷೆ: ಮೂಲತಃ ಇದನ್ನು ರಾಜಸ್ಥಾನದ ಮರುಭೂಮಿ ಪ್ರದೇಶಕ್ಕಾಗಿ ವಿನ್ಯಾಸಗೊಳಿಸಲಾಗಿತ್ತು. ಆದರೆ ಭಾರತ-ಚೀನಾ ಗಡಿ ವಿವಾದದ ಬಳಿಕ, ಇದನ್ನು ಲಡಾಖ್‌ನಂತಹ ಮೈನಸ್ ಡಿಗ್ರಿ ತಾಪಮಾನದ ಹಿಮಾವೃತ ಪ್ರದೇಶದಲ್ಲೂ ಯಶಸ್ವಿಯಾಗಿ ಬಳಸಿ ಪರೀಕ್ಷಿಸಲಾಗಿದೆ.
- ಮೊದಲ ಆರ್ಡರ್ (2017): ₹4,500 ಕೋಟಿ ವೆಚ್ಚದಲ್ಲಿ 100 ಗನ್‌ಗಳ ಒಪ್ಪಂದವಾಗಿತ್ತು (2021ರ ವೇಳೆಗೆ ಪೂರ್ಣ ಸರಬರಾಜು ಮಾಡಲಾಗಿದೆ).
- ಎರಡನೇ ಆರ್ಡರ್ (2023): ₹7,600 ಕೋಟಿ ವೆಚ್ಚದಲ್ಲಿ ಮತ್ತೊಂದು 100 ಗನ್‌ಗಳಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ