➤ ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಷಿಪ್ 2026 ರಲ್ಲಿ ಭಾರತೀಯ ಫೆನ್ಸಿಂಗ್ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಚರಿತ್ರೆಯಲ್ಲೇ ಮೊದಲ ಬಾರಿಗೆ ಓವರ್‌ಆಲ್ ಚಾಂಪಿಯನ್‌ಷಿಪ್ (Overall Title) ಅನ್ನು ಮುಡಿಗೇರಿಸಿಕೊಂಡಿದೆ.  
➤ ಹಿರಿಯ (Senior) ಹಾಗೂ ಅಂಡರ್-23 (U-23) ವಿಭಾಗಗಳಲ್ಲಿ ಒಟ್ಟಾರೆಯಾಗಿ 35 ಪದಕಗಳನ್ನು ಗೆಲ್ಲುವ ಮೂಲಕ ಭಾರತ ತಂಡವು ಪ್ರಗ್ರಹ ಸಾಧನೆ ಮಾಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ದೇಶಕ್ಕೆ ನೀಡಲಾಗುವ ಪ್ರತಿಷ್ಠಿತ ವಿಲ್ಕಿನ್ಸನ್ ಸ್ವೋರ್ಡ್ ಟ್ರೋಫಿ (Wilkinson Sword Trophy) ಭಾರತಕ್ಕೆ ಲಭಿಸಿದೆ.
➤ ಪದಕಗಳ ವಿವರ ಮತ್ತು ಸಾಧಕರು:
1. ಅಂಡರ್-23 ವಿಭಾಗ: ಆಗಸ್ಟ್ 9 ರಂದು ಆರಂಭವಾದ ಪಂದ್ಯಾವಳಿಯ ಮೊದಲ ದಿನವೇ ಭಾರತದ ಅಂಡರ್-23 ಸ್ಪರ್ಧಿಗಳು 17 ಪದಕಗಳನ್ನು ಗೆದ್ದು ಶುಭಾರಂಭ ಮಾಡಿದರು.
ಚಿನ್ನದ ಪದಕ ವಿಜೇತರು: ನಿಖಿಲ್ ವಾಘ್, ಜೋಯ್ಸ್ ಅಶಿತಾ, ಪ್ರಾಚಿ ಲೋಹಾನ್, ಮತ್ತು ಜೆಫರ್ಲಿನ್.
2. ಹಿರಿಯರ (Senior) ವೈಯಕ್ತಿಕ ವಿಭಾಗ:
  • ತನಿಕ್ಷಾ ಖಾತ್ರಿ (Épée): ಮಹಿಳೆಯರ ಹಿರಿಯರ 'ಈಪಿ' (Épée) ವಿಭಾಗದಲ್ಲಿ ಭಾರತದ ಖುಷಿ ದಾಭೇಡೆ ವಿರುದ್ಧ 15–7 ಅಂತರದಲ್ಲಿ ಜಯಗಳಿಸಿ ಚಾರಿತ್ರಿಕ ಚಿನ್ನದ ಪದಕ ಗೆದ್ದರು. ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಫೆನ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
  • ಕನಗಲಕ್ಷ್ಮಿ (Foil): ಮಹಿಳೆಯರ ಫಾಯಿಲ್ ವಿಭಾಗದಲ್ಲಿ ಚಿನ್ನದ ಪದಕ.
  • ರಾಜೇಂದ್ರನ್ ಶಾಂತಿಮೋಲ್ ಶರ್ಜಿನ್ (Épée): ಪುರುಷರ ಈಪಿ ವಿಭಾಗದಲ್ಲಿ ಚಿನ್ನ.
  • ಕರನ್ ಸಿಂಗ್ (Sabre): ಪುರುಷರ ಸೇಬರ್ ವಿಭಾಗದಲ್ಲಿ ಚಿನ್ನದ ಪದಕ.
➤ ತಂಡ ವಿಭಾಗದ ಸಾಧನೆ (Team Events): ಆಗಸ್ಟ್ 12 ರಂದು ನಡೆದ ಹಿರಿಯರ 6 ತಂಡ ವಿಭಾಗಗಳಲ್ಲಿ ಭಾರತ 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿತು:
  • ಪುರುಷರ ಸೇಬರ್ (Men's Sabre)
  • ಮಹಿಳೆಯರ ಸೇಬರ್ (Women's Sabre)
  • ಪುರುಷರ ಈಪಿ (Men's Épée)
  • ಮಹಿಳೆಯರ ಈಪಿ (Women's Épée)
  • ಮಹಿಳೆಯರ ಫಾಯಿಲ್ (Women's Foil)(ಪುರುಷರ ಫಾಯಿಲ್ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿತು)