➤ ಅಹಮದಾಬಾದ್ನಲ್ಲಿ ನಡೆದ ಪ್ರಥಮ ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಶಿಪ್-2026 (Commonwealth Kabaddi Championship 2026) ಕ್ರೀಡಾಕೂಟದಲ್ಲಿ ಭಾರತೀಯ ಕಬಡ್ಡಿ ತಂಡಗಳು ಇತಿಹಾಸ ಸೃಷ್ಟಿಸಿವೆ. ಪುರುಷ ಹಾಗೂ ಮಹಿಳಾ ಎರಡೂ ವಿಭಾಗಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಡಬಲ್ ಗೋಲ್ಡ್ ಮೆಡಲ್ (Double Gold) ಮುಡಿಗೇರಿಸಿಕೊಂಡಿದೆ.
- ವೇದಿಕೆ: ವೀರ್ ಸಾವರ್ಕರ್ ಸ್ಪೋರ್ಟ್ಸ್ ಕಾಪ್ಲೆಕ್ಸ್, ಅಹಮದಾಬಾದ್, ಗುಜರಾತ್.
- ಅವಧಿ: ಅಕ್ಟೋಬರ್ 23 ರಿಂದ ಅಕ್ಟೋಬರ್ 31, 2026.
- ಸಾಧನೆ: ಪುರುಷ ಮತ್ತು ಮಹಿಳಾ ಎರಡೂ ತಂಡಗಳು ಟೂರ್ನಮೆಂಟ್ನಿಯುದ್ದಕ್ಕೂ ಒಂದೇ ಒಂದು ಪಂದ್ಯವನ್ನೂ ಸೋಲದೆ ಅಜೇಯ (Unbeaten) ದಾಖಲೆಯೊಂದಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.
➤ ಪುರುಷರ ವಿಭಾಗದ ಫೈನಲ್ ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಸೆಣಸಾಡಿತು. ನಾಯಕ ಸುರ್ಜೀತ್ ಸಿಂಗ್ ನೇತೃತ್ವದ ಭಾರತ ತಂಡವು ಆರಂಭದಿಂದಲೇ ಎದುರಾಳಿಗಳ ಮೇಲೆ ಸಂಪೂರ್ಣ ಆಧುಪತ್ಯ ಮೆರೆಯಿತು.
- ಅಂತಿಮ ಸ್ಕೋರ್: ಭಾರತ 54 - 20 ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿತು.
- ಆಕ್ರಮಣಕಾರಿ ದಾಳಿ ಮತ್ತು ಬಲವಾದ ರಕ್ಷಣಾ ತಂತ್ರದ (Defence) ಮೂಲಕ ಭಾರತೀಯ ರೈಡರ್ಗಳು ಶ್ರೀಲಂಕಾ ತಂಡಕ್ಕೆ ಯಾವುದೇ ಅವಕಾಶ ನೀಡದೆ ಸುಲಭವಾಗಿ ಗೆಲುವು ಸಾಧಿಸಿ ಚೊಚ್ಚಲ ಕಾಮನ್ವೆಲ್ತ್ ಕಬಡ್ಡಿ ಕಿರೀಟವನ್ನು ಮುಡಿಗೇರಿಸಿಕೊಂಡರು.
➤ ಮಹಿಳಾ ವಿಭಾಗದ ಫೈನಲ್: ಉಗಾಂಡಾ ವಿರುದ್ಧ ಭಾರತಕ್ಕೆ ಭದ್ರ ಜಯ: ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲೂ ಭಾರತದ ಹೆಣ್ಣುಮಕ್ಕಳು ಅತ್ಯುತ್ತಮ ಆಟ ಪ್ರದರ್ಶಿಸಿದರು.
- ಅಂತಿಮ ಸ್ಕೋರ್: ಭಾರತ ತಂಡವು 35 - 15 ಅಂತರದಿಂದ ಉಗಾಂಡಾ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
- ಇಡೀ ಪಂದ್ಯದುದ್ದಕ್ಕೂ ಸಂಪೂರ್ಣ ನಿಯಂತ್ರಣ ಸಾಧಿಸಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡವು ಎದುರಾಳಿಗಳನ್ನು ಆಲೌಟ್ ಮಾಡುವ ಮೂಲಕ ಟೂರ್ನಿಯುದ್ದಕ್ಕೂ ತಮ್ಮ ಶ್ರೇಷ್ಠತೆಯನ್ನು ಮೆರೆದರು.
➤ ಈ ಪ್ರತಿಷ್ಠಿತ ಒಂಬತ್ತು ದಿನಗಳ ಕ್ರೀಡಾಕೂಟದಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳಿಂದ ಒಟ್ಟು 23 ತಂಡಗಳು (13 ಪುರುಷರ ತಂಡಗಳು ಮತ್ತು 10 ಮಹಿಳಾ ತಂಡಗಳು) ಭಾಗವಹಿಸಿದ್ದವು.ಕಬಡ್ಡಿ ಕ್ರೀಡೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಪ್ರಥಮ ಕಾಮನ್ವೆಲ್ತ್ ಚಾಂಪಿಯನ್ಶಿಪ್ ಅನ್ನು ಬಹಳ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಪ್ರಥಮ ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಶಿಪ್ 2026: ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಡಬಲ್ ಚಿನ್ನದ ಪದಕ!
Published by Heena Sheregar
2 hours ago