- ಆಯೋಜಿತ ದೇಶ: ರೊಮೇನಿಯಾ (Romania)
- ಪದಕಗಳ ಸಂಖ್ಯೆ: 1 ಚಿನ್ನ, 3 ಕಾಂಸ್ಯ ಹಾಗೂ 1 ಗೌರವಾನ್ವಿತ ಉಲ್ಲೇಖ (ಒಟ್ಟು 4 ಪದಕಗಳು)
- ಚಿನ್ನದ ಪದಕ ವಿಜೇತರು: ಶ್ರೀಲಕ್ಷ್ಮಿ ವೆಂಕಟರಾಮನ್ (Shrilakshmi Venkatraman)
- ಕಾಂಸ್ಯ ಪದಕ ವಿಜೇತರು:
- ಆರವ್ ಅನಿಲ್ ರಾವ್ (Aarav Anil Rao)
- ನಿಶಾಂತ್ ಶಂಕರ್ ಲಕ್ಷ್ಮಣನ್ (Nishanth Shankar Lakshmanan)
- ಅದ್ವಯ್ ಮಿಶ್ರಾ (Advay Misra)
- ಗೌರವಾನ್ವಿತ ಉಲ್ಲೇಖ (Honourable Mention): ಸೋಹಂ ಅಮಿತ್ ಪೆಡ್ನೇಕರ್ (Soham Amit Pednekar)
- ರಾಷ್ಟ್ರೀಯ ಆಯ್ಕೆ ಸಂಸ್ಥೆ: ಪಾಣಿನಿ ಭಾಷಾವಿಜ್ಞಾನ ಒಲಿಂಪಿಯಾಡ್ (Panini Linguistics Olympiad - PLO) & IIIT ಹೈದರಾಬಾದ್.
➤ ಭಾರತವು 2009 ರಿಂದ ಅಂತರರಾಷ್ಟ್ರೀಯ ಭಾಷಾವಿಜ್ಞಾನ ಒಲಿಂಪಿಯಾಡ್‌ನಲ್ಲಿ ಭಾಗವಹಿಸುತ್ತಿದ್ದು, ಇದುವರೆಗೆ ಒಟ್ಟು 37 ಪದಕಗಳನ್ನು (6 ಚಿನ್ನ, 9 ಬೆಳ್ಳಿ ಮತ್ತು 22 ಕಾಂಸ್ಯ ಪದಕಗಳು) ಗೆದ್ದುಕೊಂಡಿದೆ.
➤ ಭಾರತೀಯ ತಂಡದ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
- ಪಾಣಿನಿ ಭಾಷಾವಿಜ್ಞಾನ ಒಲಿಂಪಿಯಾಡ್ (PLO): ಭಾರತೀಯ ತಂಡವನ್ನು 'ಪಾಣಿನಿ ಭಾಷಾವಿಜ್ಞಾನ ಒಲಿಂಪಿಯಾಡ್' ಎಂಬ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
- IIIT ಹೈದರಾಬಾದ್ ಪಾತ್ರ: IIIT ಹೈದರಾಬಾದ್ ಸಂಸ್ಥೆಯು 2015 ರಿಂದ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ (Mentorship) ನೀಡುತ್ತಿದೆ.
- ತರಬೇತಿ ಶಿಬಿರ: ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ IIIT ಹೈದರಾಬಾದ್‌ನಲ್ಲಿ 10 ದಿನಗಳ ವಸತಿ ತರಬೇತಿ ಶಿಬಿರ ಆಯೋಜಿಸಿ, ಮಾಕ್ ಟೆಸ್ಟ್ ಹಾಗೂ ಸಮಸ್ಯೆ ಪರಿಹಾರ ತಂತ್ರಗಳನ್ನು ಕಲಿಸಿ ಅಂತಿಮ ತಂಡವನ್ನು ರೊಮೇನಿಯಾಕ್ಕೆ ಕಳುಹಿಸಿಕೊಡಲಾಗಿತ್ತು.
➤ ಅಂತರರಾಷ್ಟ್ರೀಯ ಭಾಷಾವಿಜ್ಞಾನ ಒಲಿಂಪಿಯಾಡ್ (IOL):
- IOL ಎಂಬುದು ಪ್ರಪಂಚದ 13 ಅಂತರರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ಗಳಲ್ಲಿ ಒಂದಾಗಿದೆ.
- ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಭಾಷಾವಿಜ್ಞಾನದ (Linguistics) ಜ್ಞಾನ ಅಗತ್ಯವಿಲ್ಲ.
- ಅಪರಿಚಿತ ಭಾಷೆಗಳ ವಾಕ್ಯರಚನೆ, ಶಬ್ದಕೋಶ ಮತ್ತು ವ್ಯಾಕರಣದ ಮಾದರಿಗಳನ್ನು (Patterns) ತರ್ಕ ಹಾಗೂ ವಿಶ್ಲೇಷಣಾತ್ಮಕ ಸಾಮರ್ಥ್ಯದ (Logical & Analytical Reasoning) ಮೂಲಕ ಕಂಡುಹಿಡಿಯುವುದು ಈ ಸ್ಪರ್ಧೆಯ ಮುಖ್ಯ ಸವಾಲಾಗಿದೆ.
- ಈ ಸಾಮರ್ಥ್ಯವು ಕೃತಕ ಬುದ್ಧಿಮತ್ತೆ (Artificial Intelligence - AI), ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಮತ್ತು ಭಾಷಾ ತಂತ್ರಜ್ಞಾನ ಬೆಳೆಸಲು ಅತ್ಯಂತ ಉಪಯುಕ್ತವಾಗಿದೆ.