➤ ಪ್ರಮುಖ ಅಂಕಿ-ಅಂಶಗಳ ಕೋಷ್ಟಕ (ಜೂನ್ ವ್ಯಾಪಾರ ದತ್ತಾಂಶ):
ಒಟ್ಟು ಸರಕು ರಫ್ತು (Merchandise Exports): $40.41 ಬಿಲಿಯನ್ ಒಟ್ಟು ಸರಕು ಆಮದು (Merchandise Imports): $70.84 ಬಿಲಿಯನ್ ವ್ಯಾಪಾರ ಕೊರತೆ (Trade Deficit): $30.43 ಬಿಲಿಯನ್
➤ ವ್ಯಾಪಾರ ಕೊರತೆ (Trade Deficit) : ಅರ್ಥಶಾಸ್ತ್ರದ ಸರಳ ವ್ಯಾಖ್ಯಾನದ ಪ್ರಕಾರ, ಒಂದು ದೇಶವು ನಿರ್ದಿಷ್ಟ ಅವಧಿಯಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಒಟ್ಟು ಮೌಲ್ಯವು, ಆ ದೇಶವು ವಿದೇಶಗಳಿಗೆ ರಫ್ತು ಮಾಡುವ ಸರಕುಗಳ ಒಟ್ಟು ಮೌಲ್ಯಕ್ಕಿಂತ ಹೆಚ್ಚಾಗಿದ್ದರೆ ಅದನ್ನು ವ್ಯಾಪಾರ ಕೊರತೆ (Trade Deficit) ಎನ್ನಲಾಗುತ್ತದೆ.
➤ ಭಾರತದಲ್ಲಿ ಜೂನ್ ತಿಂಗಳ ರಫ್ತು ಪ್ರಮಾಣ ಕುಸಿದಿರುವುದು, ಜಾಗತಿಕ ರಾಜಕೀಯ ಸಂಘರ್ಷಗಳಿಂದ ಬೇಡಿಕೆ ಕಡಿಮೆಯಾಗಿರುವುದು ಮತ್ತು ಕಚ್ಚಾ ತೈಲ ಹಾಗೂ ಚಿನ್ನದಂತಹ ಅಗತ್ಯ ವಸ್ತುಗಳ ಆಮದು ವೆಚ್ಚಗಳು ಏರಿಕೆಯಾಗಿರುವುದು ವ್ಯಾಪಾರ ಕೊರತೆ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ.
➤ ಸೇವಾ ವಲಯದಲ್ಲಿ ಸಮಾಧಾನಕರ ಸಂಗತಿ (Services Surplus): ಭಾರತವು ಸರಕು ವ್ಯಾಪಾರದಲ್ಲಿ ಕೊರತೆಯನ್ನು ಹೊಂದಿದ್ದರೂ, ಸೇವಾ ವಲಯದಲ್ಲಿ (Services Sector) ಉತ್ತಮ ಸಾಧನೆ ಮುಂದುವರಿಸಿದೆ.
- ಜೂನ್ ತಿಂಗಳ ಅಂದಾಜು ಸೇವಾ ರಫ್ತು: $33.03 ಬಿಲಿಯನ್
- ಜೂನ್ ತಿಂಗಳ ಅಂದಾಜು ಸೇವಾ ಆಮದು: $17.92 ಬಿಲಿಯನ್
- ಸೇವಾ ವಲಯದ ವ್ಯಾಪಾರ ಹೆಚ್ಚುವರಿ (Surplus): $15.11 ಬಿಲಿಯನ್