➤ ಭಾರತದ ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆ:
| 2025-26 (ಕಳೆದ ವರ್ಷ) | 7.7% (ಸಾಧಿಸಿದ ಪ್ರಗತಿ) |
| 2026-27 (ಪ್ರಸಕ್ತ ವರ್ಷ) | 6.6% |
| 2027-28 (ಮುಂದಿನ ವರ್ಷ) | 6.8% |
- ಬಲವಾದ ಗ್ರಾಮೀಣ ಅನುಭೋಗ : ದೇಶದೊಳಗಿನ ಆರ್ಥಿಕ ಚಟುವಟಿಕೆಗಳು ಉತ್ತಮವಾಗಿವೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಜನರ ಖರೀದಿ ಸಾಮರ್ಥ್ಯ ಮತ್ತು ಬಳಕೆ ಹೆಚ್ಚಾಗಿದೆ.
- ನಗರ ಪ್ರದೇಶಗಳಲ್ಲಿ ಹೆಚ್ಚಿದ ಬೇಡಿಕೆ: ನಗರ ವಲಯಗಳಲ್ಲೂ ಗ್ರಾಹಕರ ಬೇಡಿಕೆ ಚೇತರಿಸಿಕೊಳ್ಳುತ್ತಿದ್ದು, ಇದು ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡಿದೆ.
- ತೆರಿಗೆ ಕಡಿತ ಮತ್ತು ಹಣದುಬ್ಬರ ನಿಯಂತ್ರಣ: ಸರಕು ಮತ್ತು ಸೇವಾ ತೆರಿಗೆ (GST) ದರಗಳಲ್ಲಿನ ಕಡಿತ ಹಾಗೂ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕದ (Excise Duty) ಕಡಿತವು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ.
- ರಫ್ತು ವಲಯದ ಚೇತರಿಕೆ: ಐರೋಪ್ಯ ಒಕ್ಕೂಟ (EU) ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳೊಂದಿಗೆ ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳು (FTAs) ರಫ್ತು ವಲಯಕ್ಕೆ ಹೊಸ ಚೇತರಿಕೆ ತಂದಿವೆ.