➤ ಜಾಗತಿಕ ತಾಂತ್ರಿಕ ಭೂಪಟದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಅಮೆರಿಕ ನೇತೃತ್ವದ ಪ್ರತಿಷ್ಠಿತ 'ಪ್ಯಾಕ್ಸ್ ಸಿಲಿಕಾ' (Pax Silica) ಆಯಕಟ್ಟಿನ ಮೈತ್ರಿಕೂಟಕ್ಕೆ ಭಾರತ ಅಧಿಕೃತವಾಗಿ ಸೇರ್ಪಡೆಯಾಗಿದೆ. ದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್'ನಲ್ಲಿ ಈ ಮಹತ್ವದ ಘೋಷಣೆ ಮಾಡಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅಮೆರಿಕದ ಆರ್ಥಿಕ ವ್ಯವಹಾರಗಳ ಅಂಡರ್ ಸೆಕ್ರೆಟರಿ ಜಾಕೋಬ್ ಹೆಲ್ಬರ್ಗ್ ಅವರ ಸಮ್ಮುಖದಲ್ಲಿ ಭಾರತ ಈ ಘೋಷಣೆಗೆ ಸಹಿ ಹಾಕಿದೆ.
➤ ಪ್ಯಾಕ್ಸ್ ಸಿಲಿಕಾ (Pax Silica): 'ಪ್ಯಾಕ್ಸ್' ಎನ್ನುವುದು ಲ್ಯಾಟಿನ್ ಪದವಾಗಿದ್ದು, 'ಶಾಂತಿ' ಎಂಬ ಅರ್ಥ ನೀಡುತ್ತದೆ. 'ಸಿಲಿಕಾ' ಎಂದರೆ ಸೆಮಿಕಂಡಕ್ಟರ್‌ಗಳ ತಯಾರಿಕೆಯಲ್ಲಿ ಬಳಸುವ ಸಿಲಿಕಾನ್ ಚಿಪ್.ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ (ಅರೆವಾಹಕ) ಪೂರೈಕೆ ಸರಪಳಿಯನ್ನು ಸುರಕ್ಷಿತಗೊಳಿಸಲು ಅಮೆರಿಕ ಸರ್ಕಾರ ಆರಂಭಿಸಿರುವ ಅಂತರಾಷ್ಟ್ರೀಯ ಸಹಕಾರ ಗುಂಪು ಇದಾಗಿದೆ. ಡಿಸೆಂಬರ್ 2025 ರಲ್ಲಿ ಸ್ಥಾಪನೆಯಾದ ಈ ಕೂಟವು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳ ನಡುವೆ ಸಾಮರಸ್ಯ ಮತ್ತು ಭದ್ರತೆಯನ್ನು ಏರ್ಪಡಿಸುವ ಗುರಿ ಹೊಂದಿದೆ.
- ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಅವರು ಭಾರತದ ಸೇರ್ಪಡೆಯನ್ನು "ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಗತ್ಯ" ಎಂದು ಬಣ್ಣಿಸಿದ್ದಾರೆ.
- ಚೀನಾ ಸೇರಿದಂತೆ ಇತರ ಮಿತ್ರರಲ್ಲದ ರಾಷ್ಟ್ರಗಳ ಮೇಲಿನ ಸೆಮಿಕಂಡಕ್ಟರ್ ಅವಲಂಬನೆಯನ್ನು ತಗ್ಗಿಸುವುದು ಇದರ ಮುಖ್ಯ ಉದ್ದೇಶ.
- ಭಾರತದಲ್ಲಿ ಸದ್ಯ 10 ಸೆಮಿಕಂಡಕ್ಟರ್ ಪ್ಲಾಂಟ್‌ಗಳು ವಿವಿಧ ಹಂತಗಳಲ್ಲಿವೆ. ಈ ಮೈತ್ರಿಯಿಂದಾಗಿ ಭಾರತ ಜಾಗತಿಕ ಚಿಪ್ ತಯಾರಿಕಾ ಕೇಂದ್ರವಾಗಿ ಹೊರಹೊಮ್ಮಲಿದೆ.
➤ ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟದಲ್ಲಿರುವ ರಾಷ್ಟ್ರಗಳು: ಈ ಮೈತ್ರಿಕೂಟವು ವಿಶ್ವದ ಪ್ರಬಲ ಆರ್ಥಿಕ ಮತ್ತು ತಾಂತ್ರಿಕ ರಾಷ್ಟ್ರಗಳನ್ನು ಒಳಗೊಂಡಿದೆ: ಅಮೆರಿಕ (USA), ಭಾರತ (India), ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ, ಇಸ್ರೇಲ್, ಸಿಂಗಾಪುರ, ಯುನೈಟೆಡ್ ಕಿಂಗ್‌ಡಮ್ (UK), ಯುಎಇ (UAE), ಗ್ರೀಸ್, ಮತ್ತು ಕತಾರ್.
➤ ಪ್ಯಾಕ್ಸ್ ಸಿಲಿಕಾ ಸೇರ್ಪಡೆಯು 21ನೇ ಶತಮಾನದ ಆರ್ಥಿಕ ಮತ್ತು ತಾಂತ್ರಿಕ ವ್ಯವಸ್ಥೆಯಲ್ಲಿ ಭಾರತವನ್ನು ಪ್ರಬಲ ನಾಯಕನನ್ನಾಗಿ ರೂಪಿಸಲಿದೆ. ಇದು ಕೇವಲ ವ್ಯಾಪಾರ ಒಪ್ಪಂದವಲ್ಲ, ಬದಲಿಗೆ ಭವಿಷ್ಯದ ಡಿಜಿಟಲ್ ಜಗತ್ತನ್ನು ಆಳುವ 'ತಾಂತ್ರಿಕ ರಾಜತಾಂತ್ರಿಕತೆ'ಯಾಗಿದೆ.
ಈಗಾಗಲೇ ಅಧಿಸೂಚಿದ KEA ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
ಮಂಗಳವಾರ, 24 ಫೆಬ್ರುವರಿ 2026
11:40 ಪೂರ್ವಾಹ್ನ
Daily PDF
ಪ್ಯಾಕ್ಸ್ ಸಿಲಿಕಾ (Pax Silica): ಜಾಗತಿಕ ತಂತ್ರಜ್ಞಾನ ಮೈತ್ರಿಕೂಟಕ್ಕೆ ಭಾರತದ ಸೇರ್ಪಡೆ
Authored by:
Akshata Halli