➤ ಭಾರತವು ಮೊದಲ ಬಾರಿಗೆ BIMSTEC (Bay of Bengal Initiative for Multi-Sectoral Technical and Economic Cooperation) ಸಮುದ್ರ ಭದ್ರತಾ ಅಭ್ಯಾಸಕ್ಕೆ ಆತಿಥ್ಯ ವಹಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀ ವಿಜಯಪುರಂನಲ್ಲಿ ಅಕ್ಟೋಬರ್ 30ರಂದು ಅಧಿಕೃತವಾಗಿ ಆರಂಭಗೊಂಡಿರುವ ಈ ಸಮರಾಭ್ಯಾಸವು ನವೆಂಬರ್ 3ರವರೆಗೆ ನಡೆಯಲಿದೆ. ಬಂಗಾಳಕೊಲ್ಲಿಯ (Bay of Bengal) ವ್ಯಾಪ್ತಿಯಲ್ಲಿ ಪ್ರಾದೇಶಿಕ ಸಮುದ್ರ ಸಹಕಾರವನ್ನು ಬಲಪಡಿಸಲು, ಕಾರ್ಯಾಚರಣೆಯ ಸಮನ್ವಯತೆಯನ್ನು (Operational Coordination) ಹೆಚ್ಚಿಸಲು ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ವಿಶ್ವಾಸವನ್ನು ವೃದ್ಧಿಸಲು ಈ ಕವಾಯತು ಮಹತ್ವದ ವೇದಿಕೆಯಾಗಿದೆ.
➤ ಕಾರ್ಯಕ್ರಮದ ಹಂತಗಳು:
- ಮೊದಲ 3 ದಿನಗಳು: ಟೇಬಲ್ಟಾಪ್ ಅಭ್ಯಾಸಗಳು (Tabletop Exercises).
- ಮುಂದಿನ 2 ದಿನಗಳು: ಹಾರ್ಬರ್ ಹಂತ (Harbour Phase) ಹಾಗೂ BIMSTEC ಸದಸ್ಯ ರಾಷ್ಟ್ರಗಳ ನೌಕಾಪಡೆಯ ಹಡಗುಗಳ ನೇರ ಭಾಗಿತ್ವ.
➤ BIMSTEC ಸಂಘಟನೆಯ ಕುರಿತು ಸಂಕ್ಷಿಪ್ತ ಮಾಹಿತಿ:
- ಪೂರ್ಣ ರೂಪ: Bay of Bengal Initiative for Multi-Sectoral Technical and Economic Cooperation (ಬಂಗಾಳಕೊಲ್ಲಿ ರಾಷ್ಟ್ರಗಳ ಬಹುಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಒಕ್ಕೂಟ).
- ಸ್ಥಾಪನೆ: ಜೂನ್ 6, 1997.
- ಸದಸ್ಯ ರಾಷ್ಟ್ರಗಳು (ಒಟ್ಟು 7):
1. ಭಾರತ (India)
2. ಬಂಗ್ಲಾದೇಶ (Bangladesh)
3. ಮ್ಯಾನ್ಮಾರ್ (Myanmar)
4. ಶ್ರೀಲಂಕಾ (Sri Lanka)
5. ಥೈಲ್ಯಾಂಡ್ (Thailand)
6. ಭೂತಾನ್ (Bhutan)
7. ನೇಪಾಳ (Nepal)
- ಉದ್ದೇಶ: ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ದೇಶಗಳ ನಡುವೆ ಆರ್ಥಿಕ, ತಾಂತ್ರಿಕ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು.
ಭಾರತದಲ್ಲಿ ಮೊದಲ ಬಾರಿಗೆ ಬಿಮ್ಸ್ಟೆಕ್ (BIMSTEC) ಸಮುದ್ರ ಸುರಕ್ಷತಾ ಸಮರಾಭ್ಯಾಸ ಆರಂಭ
Published by Akshata Halli
31 ಅಕ್ಟೋಬರ್ 2026