- ರಫ್ತು ಪ್ರಮಾಣ: 2 ಕಂಟೇನರ್‌ಗಳಲ್ಲಿ ಒಟ್ಟು 7 ಮೆಟ್ರಿಕ್ ಟನ್ ಮೌಲ್ಯವರ್ಧಿತ (Flavoured) ಮಖಾನಾ.
- ಆರಂಭಿಕ ಸ್ಥಳ: ದರ್ಭಾಂಗ (ಬಿಹಾರ)
- ನಿರ್ಗಮನ ಬಂದರು: ಗುಜರಾತಿನ ಮುಂಡ್ರಾ ಬಂದರು (Mundra Port).
- ತಲುಪುವ ಸ್ಥಳ: ಕೆನಡಾದ ZKV ಫುಡ್ಸ್.
- ಸಂಸ್ಕರಣಾ ಸಂಸ್ಥೆ: ನುಟ್ರಿವಿನ್ ಆಗ್ರೋ ಪ್ರೈವೇಟ್ ಲಿಮಿಟೆಡ್ (Nutrivin Agro Pvt Ltd).
- ಸಂಯೋಜನೆ: ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA).
- ಸ್ಥಳೀಯ ಉತ್ಪಾದನೆ: ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಮಖಾನಾದ ಶೇ. 85 ರಿಂದ 90 ರಷ್ಟು ಭಾಗ ಬಿಹಾರದಲ್ಲೇ ಬೆಳೆಯಲಾಗುತ್ತದೆ. ದರ್ಭಾಂಗ, ಮಧುಬನಿ, ಪೂರ್ಣಿಯಾ, ಕಟಿಹಾರ್ ಮತ್ತು ಸಹರ್ಸಾ ಜಿಲ್ಲೆಗಳು ಇದರ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ.
- ಆದಾಯ ಹೆಚ್ಚಳ: ಕಚ್ಚಾ ಮಖಾನಾ ಬದಲಿಗೆ ಸಂಸ್ಕರಿಸಿದ ಹಾಗೂ ವಿವಿಧ ರುಚಿ (Flavoured) ಹೊಂದಿದ ಮಖಾನಾ ರಫ್ತು ಮಾಡುವುದರಿಂದ ರೈತರಿಗೆ ಶೇ. 50 ಕ್ಕಿಂತ ಹೆಚ್ಚು ಆದಾಯ ದೊರೆಯುತ್ತದೆ.
- ಆರೋಗ್ಯಕರ ಪೌಷ್ಟಿಕಾಂಶ: ಮಖಾನಾದಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಗ್ಲುಟನ್-ಮುಕ್ತ (Gluten-free) ಆಹಾರವಾಗಿದೆ.
➤ ಮಿಥಿಲಾ ಮಖಾನಾ ಮತ್ತು GI ಟ್ಯಾಗ್ (Geographical Indication):
- ಬಿಹಾರದ 'ಮಿಥಿಲಾ ಮಖಾನಾ' (Mithila Makhana) ಉತ್ಪನ್ನಕ್ಕೆ ಆಗಸ್ಟ್ 2022 ರಲ್ಲಿ ಭೌಗೋಳಿಕ ಸೂಚಕ (GI Tag) ಮಾನ್ಯತೆ ನೀಡಲಾಗಿದೆ.
- ಜಿಐ ಟ್ಯಾಗ್ ಉತ್ಪನ್ನದ ವಿಶಿಷ್ಟ ಮೂಲ, ಗುಣಮಟ್ಟ ಮತ್ತು ಸಾಂಪ್ರದಾಯಿಕತೆಯನ್ನು ಜಾಗತಿಕವಾಗಿ ಪ್ರಮಾಣೀಕರಿಸುತ್ತದೆ.