➤ ಭಾರತವು ರಕ್ಷಣಾ ತಯಾರಿಕೆಯಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಆಕಾಶ್’ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು (Akash Air Defence System) ಆರ್ಮೇನಿಯಾದ ಬಳಿಕ ಈಗ ಮಧ್ಯ ಏಷ್ಯಾದ ಪ್ರಮುಖ ದೇಶಗಳಾದ ತಾಜಿಕಿಸ್ತಾನ್ ಮತ್ತು ತುರ್ಕಮೇನಿಸ್ತಾನ್‌ಗಳಿಗೂ ಯಶಸ್ವಿಯಾಗಿ ರಫ್ತು ಮಾಡಲಾಗಿದೆ ಎಂದು ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. 
- ಆರಂಭಿಕ ಗ್ರಾಹಕ: ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದ ಮೊದಲ ವಿದೇಶಿ ದೇಶ ಆರ್ಮೇನಿಯಾ.
- ಹೊಸ ದೇಶಗಳು: ಮಧ್ಯ ಏಷ್ಯಾದ ತಾಜಿಕಿಸ್ತಾನ್ ಮತ್ತು ತುರ್ಕಮೇನಿಸ್ತಾನ್ ದೇಶಗಳಿಗೆ ಆಕಾಶ್ ವ್ಯವಸ್ಥೆಯನ್ನು ಯಶಸ್ವಿಯಾಗಿ ರಫ್ತು ಮಾಡಲಾಗಿದೆ.
- ತಯಾರಕ ಸಂಸ್ಥೆಗಳು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇದನ್ನು ವಿನ್ಯಾಸಗೊಳಿಸಿದ್ದು, ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಹಾಗೂ ಭಾರತ ಡೈನಾಮಿಕ್ಸ್ ಲಿಮಿಟೆಡ್ (BDL) ಉತ್ಪಾದಿಸುತ್ತಿವೆ.
- ರಫ್ತು ಗುರಿ: ಮುಂದಿನ ಎರಡು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತಿನ ಮೌಲ್ಯವನ್ನು ₹50,000 ಕೋಟಿಗೆ ಹೆಚ್ಚಿಸುವ ಗುರಿಯನ್ನು ರಕ್ಷಣಾ ಸಚಿವಾಲಯ ಹೊಂದಿದೆ.
➤ 'ಆಕಾಶ್' ಕ್ಷಿಪಣಿ ವ್ಯವಸ್ಥೆಯ ತಾಂತ್ರಿಕ ವಿವರಣೆ: 
- ಕ್ಷಿಪಣಿ ಪ್ರಕಾರ: ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (SR-SAM)
- ಕಾರ್ಯಾಚರಣೆ ವ್ಯಾಪ್ತಿ: 4.5 ಕಿ.ಮೀ ನಿಂದ 25-30 ಕಿ.ಮೀ (ಆಕಾಶ್ NG ತಳಿ: 50 ಕಿ.ಮೀ ವರೆಗೆ)
- ಎತ್ತರ ಸಾಮರ್ಥ್ಯ: 100 ಮೀಟರ್‌ನಿಂದ 20 ಕಿ.ಮೀ ಎತ್ತರದಲ್ಲಿರುವ ಗುರಿ ಧ್ವಂಸ
- ತೂಕ ಮತ್ತು ಉದ್ದಉದ್ದ: 5.87 ಮೀಟರ್ | ತೂಕ: ಸುಮಾರು 710 ಕೆಜಿ
- ವಿಶೇಷತೆ: ಏಕಕಾಲದಲ್ಲಿ ಹಲವು ವಾಯು ದಾಳಿ ಗುರಿಗಳನ್ನು ಪತ್ತೆಹಚ್ಚಿ ಧ್ವಂಸ ಮಾಡುವ ಸಾಮರ್ಥ್ಯ