➤ ಈ ಮಹತ್ವದ ಎಂಜಿನ್ ಅನ್ನು ಆಜಾದ್ ಎಂಜಿನಿಯರಿಂಗ್ ಸಿಇಒ ರಾಕೇಶ್ ಚೋಪ್ಡಾರ್ ಅವರು ಏರೋನಾಟಿಕಲ್ ಸಿಸ್ಟಮ್ಸ್‌ನ ಡೈರೆಕ್ಟರ್ ಜನರಲ್ ಡಾ. ಕೆ. ರಾಜಲಕ್ಷ್ಮಿ ಮೆನನ್ ಹಾಗೂ GTRE ನಿರ್ದೇಶಕ ಡಾ. ಎಸ್. ವಿ. ರಮಣಮೂರ್ತಿ ಅವರಿಗೆ ಔಪಚಾರಿಕವಾಗಿ ಹಸ್ತಾಂತರಿಸಿದರು. ಈ ಸಾಧನೆಯನ್ನು ಶ್ಲಾಘಿಸಿದ ರಕ್ಷಣಾ ಕಾರ್ಯದರ್ಶಿ ಹಾಗೂ DRDO ಅಧ್ಯಕ್ಷ ರಾಜೇಶ್ ಕುಮಾರ್ ಸಿಂಗ್, ಭಾರತೀಯ ಸಂಶೋಧನಾ ಸಂಸ್ಥೆ ಮತ್ತು ಖಾಸಗಿ ಕೈಗಾರಿಕೆಗಳ ನಡುವಿನ ಯಶಸ್ವಿ ಸಹಭಾಗಿತ್ವಕ್ಕೆ ಇದು ಅತ್ಯುತ್ತಮ ನಿದರ್ಶನ ಎಂದಿದ್ದಾರೆ.
➤ ‘ಎಕ್ಸ್‌ಪೆಂಡೇಬಲ್ ಟರ್ಬೊಜೆಟ್ ಎಂಜಿನ್’
- ಖರ್ಚಾಗುವ/ಏಕಬಳಕೆಯ ಎಂಜಿನ್ (Expendable Engine): ಕೇವಲ ಒಮ್ಮೆ ಮಾತ್ರ ಬಳಸಲು ವಿನ್ಯಾಸಗೊಳಿಸಲಾದ ಅತ್ಯಂತ ಹಗುರವಾದ ಹಾಗೂ ವೇಗದ ಜೆಟ್ ಎಂಜಿನ್‌ಗಳು.
- ಬಳಕೆ: ಇವುಗಳನ್ನು ಮುಖ್ಯವಾಗಿ ಕ್ಷಿಪಣಿಗಳು (Missiles), ಅನ್‌ಮ್ಯಾನ್ಡ್ ವೈಮಾನಿಕ ವಾಹನಗಳು (UAVs / Drones) ಮತ್ತು ಗುರಿ ಅಭ್ಯಾಸ ವ್ಯವಸ್ಥೆಗಳಲ್ಲಿ (Target Drones) ಬಳಸಲಾಗುತ್ತದೆ.
- ತಂತ್ರಜ್ಞಾನದ ಪ್ರಾಮುಖ್ಯತೆ: ಜೆಟ್ ಎಂಜಿನ್ ತಂತ್ರಜ್ಞಾನವನ್ನು ಜಗತ್ತಿನ ಅತ್ಯಂತ ಸಂಕೀರ್ಣ ಎಂಜಿನಿಯರಿಂಗ್ ವಿಭಾಗವೆಂದು ಪರಿಗಣಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಿರುವುದು ಭಾರತದ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ದೊಡ್ಡ ಬಲ ತಂದಿದೆ.