➤ ಚೀನಾದ ಮೋಕಿಯಲ್ಲಿ ನಡೆದ ಎಎಚ್‌ಎಫ್ ಜೂನಿಯರ್ ಏಷ್ಯಾ ಕಪ್ 2026ರಲ್ಲಿ (AHF Junior Asia Cup 2026) ಭಾರತೀಯ ಹಾಕಿ ತಂಡಗಳು ಅಭೂತಪೂರ್ವ ಸಾಧನೆ ಮಾಡಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗವೆರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 'ಗೋಲ್ಡನ್ ಡಬಲ್' (Golden Double) ಮುಡಿಗೇರಿಸಿಕೊಂಡಿವೆ.
- ಮಹಿಳೆಯರ ವಿಭಾಗ: ಭಾರತೀಯ ಮಹಿಳಾ ತಂಡವು ಆತಿಥೇಯ ಚೀನಾವನ್ನು 1-0 ಅಂತರದಿಂದ ಸೋಲಿಸಿ ಸತತ 3ನೇ ಬಾರಿ (Hat-trick) ಜೂನಿಯರ್ ಏಷ್ಯಾ ಕಪ್ ಪ್ರಶಸ್ತಿ ಗೆದ್ದುಕೊಂಡಿತು.
- ಪುರುಷರ ವಿಭಾಗ: ಭಾರತೀಯ ಪುರುಷರ ತಂಡವು ದಕ್ಷಿಣ ಕೊರಿಯಾವನ್ನು 4-1 ಅಂತರದಿಂದ ಭರ್ಜರಿಯಾಗಿ ಮಣಿಸಿ 6ನೇ ಬಾರಿಗೆ (ದಾಖಲೆಯ) ಚಾಂಪಿಯನ್ ಆಯಿತು.
- ವಿಶ್ವಕಪ್ ಅರ್ಹತೆ: ಈ ಗೆಲುವಿನೊಂದಿಗೆ ಭಾರತದ ಎರಡೂ ತಂಡಗಳು ಮುಂದಿನ ವರ್ಷ ನಡೆಯಲಿರುವ ಎಫ್‌ಐಎಚ್ (FIH) ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ.
➤ ಮಹಿಳೆಯರ ಜೂನಿಯರ್ ಏಷ್ಯಾ ಕಪ್ 2026 : ಖೈದೇಮ್ ಶಿಲೈಮಾ ಚಾನು (Khaidem Shileima Chanu) ಅವರ ನಾಯಕತ್ವದಲ್ಲಿ ಭಾರತ ಮಹಿಳಾ ತಂಡವು ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್ ಪಟ್ಟಕ್ಕೇರಿತು.
- ಫೈನಲ್ ಪಂದ್ಯ: ಭಾರತ 1 – 0 ಚೀನಾ
- ವಿನ್ನಿಂಗ್ ಗೋಲ್: ಸನಿಕಾ ಚಂದ್ರಕಾಂತ್ ಮಾನೆ (17ನೇ ನಿಮಿಷ)
- ಮುಖ್ಯ ತರಬೇತುದಾರರು (Coach): ಟಿಮ್ ವೈಟ್ (Tim White)
- ಉನ್ನತ ಸಾಧನೆ: ಸನಿಕಾ ಮಾನೆ (ಟೂರ್ನಿಯಲ್ಲಿ ಜಂಟಿ ಗರಿಷ್ಠ 7 ಗೋಲುಗಳು)
- ಕ್ವಾರ್ಟರ್ ಫೈನಲ್ ಪಂದ್ಯ:ಭಾರತ 19 – 0 ಪಾಕಿಸ್ತಾನ
➤ ಪುರುಷರ ಜೂನಿಯರ್ ಏಷ್ಯಾ ಕಪ್ 2026 : ಅನ್ಮೋಲ್ ಎಕ್ಕಾ (Anmol Ekka) ನಾಯಕತ್ವದ ಭಾರತ ಪುರುಷರ ಜೂನಿಯರ್ ತಂಡವು ಕೊರಿಯಾವನ್ನು ಮಣಿಸಿ ತಮ್ಮ 6ನೇ ಖಂಡಾಂತರ ಪ್ರಶಸ್ತಿಯನ್ನು (2004, 2008, 2015, 2023, 2024, 2026) ತನ್ನದಾಗಿಸಿಕೊಂಡಿತು.
- ಫೈನಲ್ ಪಂದ್ಯ: ಭಾರತ 4 – 1 ದಕ್ಷಿಣ ಕೊರಿಯಾ
- ಫೈನಲ್‌ನಲ್ಲಿ ಗೋಲು ಬಾರಿಸಿದವರು: ಅಜೀತ್ ಯಾದವ್ (9'), ಅನ್ಮೋಲ್ ಎಕ್ಕಾ (13'), ಪ್ರಭ್‌ದೀಪ್ ಸಿಂಗ್ (21'), ಆಶು ಮೌರ್ಯ (50')
- ಮುಖ್ಯ ತರಬೇತುದಾರರು (Coach): ಫ್ರೆಡೆರಿಕ್ ಸೊಯೆಜ್ (Frederic Soyez)
- ಟೂರ್ನಿಯ ಟಾಪ್ ಸ್ಕೋರರ್:ಅನ್ಮೋಲ್ ಎಕ್ಕಾ (ಮೊತ್ತ 17 ಗೋಲುಗಳು)
ಮಂಗಳವಾರ, 15 ಸೆಪ್ಟೆಂಬರ್ 2026
10:42 ಪೂರ್ವಾಹ್ನ
Daily PDF
ಜೂನಿಯರ್ ಏಷ್ಯಾ ಕಪ್ 2026: ಹಾಕಿ ಕ್ಷೇತ್ರದಲ್ಲಿ ಭಾರತ ಪುರುಷ ಮತ್ತು ಮಹಿಳೆಯರ ಹೊಸ ಇತಿಹಾಸ!
Authored by:
Akshata Halli
