➤ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ಭಾರತೀಯ ಆಟಗಾರರು ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ವಿಶ್ವ ದಾಖಲೆಗಳ ಪುಟಗಳನ್ನು ತಲೆಕೆಳಗಾಗಿಸಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ರೋಚಕ ಪ್ರದರ್ಶನ ನೀಡಿದ ಭಾರತ ತಂಡ, ದಾಖಲೆಗಳ ಸರಮಾಲೆಯನ್ನೇ ನಿರ್ಮಿಸಿದೆ. ಈ ಪಂದ್ಯದಲ್ಲಿ ಕೇವಲ ಗೆಲುವಷ್ಟೇ ಅಲ್ಲದೆ, ವೈಯಕ್ತಿಕ ಹಾಗೂ ಸಾೂಹಿಕ ಮಟ್ಟದಲ್ಲಿ ಹಲವಾರು ಐತಿಹಾಸಿಕ ದಾಖಲೆಗಳು ನಿರ್ಮಾಣವಾಗಿವೆ.
➤ ಐತಿಹಾಸಿಕ ದಾಖಲೆಗಳ ವಿವರಗಳು:
1.  ಪವರ್‌ಪ್ಲೇಯಲ್ಲಿ ಸಾರ್ವಕಾಲಿಕ ಗರಿಷ್ಠ ಮೊತ್ತ (Highest Powerplay Score): ನ್ಯೂಜಿಲೆಂಡ್ ನೀಡಿದ್ದ 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭಿಕ ಆಟಗಾರರು ಕೇವಲ ಮೊದಲ 6 ಓವರ್‌ಗಳಲ್ಲಿ ಅಂದರೆ ಪವರ್‌ಪ್ಲೇ ಮುಕ್ತಾಯಕ್ಕೆ ವಿಕೆಟ್ ನಷವಿಲ್ಲದೆ ಭರ್ಜರಿ 118 ರನ್‌ಗಳನ್ನು ಕಲೆಹಾಕಿದರು. ಇದು ಅಂತಾರಾಷ್ಟ್ರೀಯ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪವರ್‌ಪ್ಲೇ ಒಂದರಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಸ್ಕೋರ್ ಆಗಿದೆ. ಈ ಮೂಲಕ ರೋಮೇನಿಯಾ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಭಾರತ ಮುರಿದೆಡೆದಿದೆ.
2. ಅಭಿಷೇಕ್ ಶರ್ಮಾ ಸ್ಪೋಟಕ ಶತಕ (Fastest Century vs NZ): ಯುವ ದಾಂಡಿಗ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಗೆ ಇವರು ಪಾತ್ರರಾದರು. ಒಟ್ಟು 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್‌ಗಳೊಂದಿಗೆ 113 ರನ್ ಸಿಡಿಸಿ ಅಜೇಯರಾಗಿ ಉಳಿದರು.
3. ವಿರಾಟ್ ಕೊಹ್ಲಿ ದಾಖಲೆ ಮುರಿದರು ಅಭಿಷೇಕ್ ಶರ್ಮಾ: ಅಭಿಷೇಕ್ ಶರ್ಮಾ ಒಟ್ಟಾರೆ ತಮ್ಮ ಟಿ20 ಕ್ರಿಕೆಟ್ ವೃತ್ತಿಜೀವನದಲ್ಲಿ ಗಳಿಸಿದ 11ನೇ ಶತಕ ಇದಾಗಿದೆ. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 10 ಶತಕ ಹೊಂದಿದ್ದ ವಿರಾಟ್ ಕೊಹ್ಲಿ ಅವರನ್ನು ಹಿಂದೆಕ್ಕಿ ಅಭಿಷೇಕ್ ಶರ್ಮಾ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (22) ಅಗ್ರಸ್ಥಾನದಲ್ಲಿದ್ದಾರೆ.
4. ದಾಖಲೆಯ ಆರಂಭಿಕ ಜುಗಲ್ಬಂದಿ (Record Opening Partnership): ಅಭಿಷೇಕ್ ಶರ್ಮಾ ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ ಜೋಡಿಯು ಮೊದಲ ವಿಕೆಟ್‌ಗೆ ಕೇವಲ 7.1 ಓವರ್‌ಗಳಲ್ಲಿ 133 ರನ್‌ಗಳ ಸ್ಪೋಟಕ ಜೊತೆಯಾಟವಾಡಿತು. ಪೂರ್ಣ ಪ್ರಮಾಣದ ಟೆಸ್ಟ್ ಆಡುವ ರಾಷ್ಟ್ರಗಳ ನಡುವಿನ ಟಿ20 ಪಂದ್ಯಗಳಲ್ಲಿ ಇದು ಅತ್ಯಂತ ಕನಿಷ್ಠ ಎಸೆತಗಳಲ್ಲಿ ಮೂಡಿಬಂದ ಗರಿಷ್ಠ ಆರಂಭಿಕ ಜೊತೆಯಾಟಗಳಲ್ಲಿ ಒಂದಾಗಿದೆ.
5. ಬೃಹತ್ ಗುರಿ ಬೆನ್ನಟ್ಟುವಾಗ ಅತಿ ಹೆಚ್ಚು ಎಸೆತಗಳು ಬಾಕಿ: 199 ರನ್‌ಗಳ ಬೃಹತ್ ಗುರಿಯನ್ನು ಭಾರತ ತಂಡವು ಕೇವಲ 13.2 ಓವರ್‌ಗಳಲ್ಲಿ (40 ಎಸೆತಗಳು ಬಾಕಿ ಇರುವಂತೆ) ಕೇವಲ 4 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ತಲುಪಿತು. 190ಕ್ಕೂ ಅಧಿಕ ರನ್‌ಗಳ ಗುರಿಯನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ಕಡಿಮೆ ಓವರ್‌ಗಳಲ್ಲಿ ಮತ್ತು ಇಷ್ಟು ಹೆಚ್ಚು ಎಸೆತಗಳು ಬಾಕಿ ಇರುವಂತೆ ತಲುಪಿದ ಅಪರೂಪದ ದಾಖಲೆ ಇದು.