➤ ಭಾರತವು ಜಗತ್ತಿನ ಮುಂಚೂಣಿ ಉತ್ಪಾದನಾ ಕೇಂದ್ರವಾಗಿ (Global Manufacturing Hub) ಹೊರಹೊಮ್ಮುತ್ತಿರುವ ಕುರಿತು ಇತ್ತೀಚೆಗೆ ಮೇಕಿಂಗ್ ಆಫ್ ಎ ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
➤ ಮೊರಕ್ಕೊ ಮೂಲದ ಪ್ರಸಿದ್ಧ 'ಅಸಾಹೀಫಾ' (Assahifa) ವಾರಪತ್ರಿಕೆಯು ತನ್ನ ವರದಿಯಲ್ಲಿ:

"ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಸಾಗರೋತ್ತರ ಹೂಡಿಕೆ ಹಾಗೂ ರಚನಾತ್ಮಕ ಸುಧಾರಣೆಗಳಿಂದಾಗಿ ಭಾರತೀಯ ಉತ್ಪಾದನಾ ವಲಯವು ಅದ್ಭುತ ಬೆಳವಣಿಗೆ ಸಾಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರಮುಖ ಜಾಗತಿಕ ಉತ್ಪಾದನಾ ತಾಣವಾಗುವ ಎಲ್ಲ ಲಕ್ಷಣಗಳಿವೆ" ಎಂದು ಪ್ರಶಂಸಿಸಿದೆ.
➤ ಇದರೊಂದಿಗೆ, ಭಾರತದ ನೀತಿ ಆಯೋಗ (NITI Aayog) ಮತ್ತು CRISIL Intelligence ಜಂಟಿಯಾಗಿ ಇತ್ತೀಚೆಗೆ ಬಿಡುಗಡೆ ಮಾಡಿದ "Key Sectors to Position India as a Global Manufacturing Hub" ವರದಿಯು ಭಾರತವನ್ನು ವಿಕ್ಷಿತ್ ಭಾರತ @2047 (Viksit Bharat @2047) ಕಲ್ಪನೆಯತ್ತ ಕೊಂಡೊಯ್ಯಲು ಉತ್ಪಾದನಾ ವಲಯವೇ ಪ್ರಮುಖ ಚಾಲಕ ಶಕ್ತಿ ಎಂಬುದನ್ನು ಎತ್ತಿಹಿಡಿದಿದೆ.
ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುತ್ತಿರುವ ಪ್ರಮುಖ ಸುಧಾರಣೆಗಳು:

  • ಮೇಕಿಂಗ್ ಇನ್ ಇಂಡಿಯಾ (Make in India): 2014 ರಲ್ಲಿ ಪ್ರಾರಂಭಗೊಂಡ ಈ ಯೋಜನೆಯು ಭಾರತವನ್ನು ಅಂತಾರಾಷ್ಟ್ರೀಯ ಕಂಪನಿಗಳ ನೆಚ್ಚಿನ ಹೂಡಿಕೆ ತಾಣವನ್ನಾಗಿ ಮಾರ್ಪಡಿಸಿದೆ.
  • ಉತ್ಪಾದನೆ ಆಧರಿತ ಉತ್ತೇಜನ (PLI ) ಯೋಜನೆ: ದೇಶೀಯ ಉತ್ಪಾದನೆಗೆ ವೇಗ ನೀಡಲು ಹಾಗೂ ರಫ್ತು ಹೆಚ್ಚಿಸಲು ೧೪ಕ್ಕೂ ಹೆಚ್ಚು ಪ್ರಮುಖ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ರೂ.ಗಳ ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತಿದೆ.
  • ಪಿಎಂ ಗತಿ ಶಕ್ತಿ : ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಯ ಏಕೀಕರಣಕ್ಕಾಗಿ ಜಾರಿಗೆ ಬಂದ ಯೋಜನೆ.
  • ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ: ಸರಕು ಸಾಗಣೆ ವೆಚ್ಚವನ್ನು (Logistics cost) ಕಡಿಮೆ ಮಾಡಿ ಜಾಗತಿಕ ರಫ್ತು ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು.
  • ಜಿಎಸ್‌ಟಿ ಮತ್ತು ಡಿಜಿಟಲ್ ಆಡಳಿತ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯು ದೇಶಾದ್ಯಂತ 'ಒಂದೇ ತೆರಿಗೆ-ಒಂದೇ ಮಾರುಕಟ್ಟೆ' ಕಲ್ಪನೆಯನ್ನು ತಂದಿದ್ದರೆ, ಡಿಜಿಟಲ್ ವ್ಯವಸ್ಥೆ ಹಾಗೂ ಕಾರ್ಮಿಕ ಕಾನೂನುಗಳ ತರ್ಕಬದ್ಧತೆಯು ('Ease of Doing Business') ಜಾಗತಿಕ ಕಂಪನಿಗಳಿಗೆ ಸುಲಭ ಉದ್ಯಮ ವಾತಾವರಣ ಸೃಷ್ಟಿಸಿದೆ.

ನೀತಿ ಆಯೋಗ ಗುರುತಿಸಿರುವ 12 ಪ್ರಮುಖ ಆದ್ಯತೆಯ ಕ್ಷೇತ್ರಗಳು:

ಟೆಲಿಕಾಂ ಉಪಕರಣಗಳು (Telecom Equipment), ಸೌರ ಪಿವಿ (Solar PV), ಔಷಧ ವಲಯ (Pharmaceuticals),    ರಾಸಾಯನಿಕಗಳು (Chemicals), ಆಟೋಮೊಬೈಲ್ಸ್ (Automobiles), ರಕ್ಷಣೆ ಮತ್ತು ಡ್ರೋನ್‌ಗಳು (Defence & Drones),ಉಕ್ಕು (Steel), ಬಂಡವಾಳ ಸರಕುಗಳು (Capital Goods), ಜವಳಿ (Textiles), ಆಹಾರ ಸಂಸ್ಕರಣೆ (Food Processing), ಚರ್ಮ ಮತ್ತು ಪಾದರಕ್ಷೆಗಳು (Leather & Footwear)