➤ ಭಾರತೀಯ ರೈಲ್ವೇಯು ದೇಶದ ಸಾರಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ತನ್ನ ಬ್ರಾಡ್ ಗೇಜ್ (Broad Gauge - BG) ಜಾಲದ 99.6% ಭಾಗವನ್ನು ವಿದ್ಯುದ್ದೀಕರಣ (Electrification) ಗೊಳಿಸುವ ಮೂಲಕ, ಸ್ವಿಜರ್ಲ್ಯಾಂಡ್ ನಂತರ ವಿಶ್ವದಲ್ಲೇ 2ನೇ ಅತ್ಯಂತ ಹೆಚ್ಚು ವಿದ್ಯುದ್ದೀಕೃತ ರೈಲ್ವೇ ಜಾಲ ಹೊಂದಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ ಹಾಗೂ ಇಂಟರ್ನ್ಯಾಷನಲ್ ಯೂನಿಯನ್ ಆಫ್ ರೈಲ್ವೇಸ್ (UIC) ವರದಿಯಂತೆ, ಭಾರತವು ಈ ಕ್ಷೇತ್ರದಲ್ಲಿ ಚೀನಾ, ಜಪಾನ್, ಫ್ರಾನ್ಸ್ ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಹಿಂದಿಕ್ಕಿದೆ.
➤ ಜಾಗತಿಕ ಮಟ್ಟದಲ್ಲಿ ರೈಲ್ವೇ ವಿದ್ಯುದ್ದೀಕರಣ (UIC ವರದಿ):
ಸ್ವಿಜರ್ಲ್ಯಾಂಡ್: 100%

ಭಾರತ: 99.6%
ಚೀನಾ: 82%
ಸ್ಪೇನ್: 67%
➤ ಪರಿಸರ ಸ್ನೇಹಿ ಸಾರಿಗೆ ಮತ್ತು ಕಾರ್ಬನ್ ಹೊರಸೂಸುವಿಕೆ ಇಳಿಕೆ:
  • ರಸ್ತೆ ಸಾರಿಗೆ: 1 ಟನ್ ಸರಕನ್ನು 1 ಕಿ.ಮೀ. ಸಾಗಿಸಲು 101 ಗ್ರಾಂ CO₂ ಬಿಡುಗಡೆಯಾಗುತ್ತದೆ.
  • ರೈಲು ಸಾರಿಗೆ: 1 ಟನ್ ಸರಕನ್ನು 1 ಕಿ.ಮೀ. ಸಾಗಿಸಲು ಕೇವಲ 11.5 ಗ್ರಾಂ CO₂ ಬಿಡುಗಡೆಯಾಗುತ್ತದೆ.
  • ಅಂದರೆ, ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ಸಾರಿಗೆಯಿಂದ ಕಾರ್ಬನ್ ಹೊರಸೂಸುವಿಕೆ ಶೇಕಡಾ 89% ರಷ್ಟು ಕಡಿಮೆ ಇರುತ್ತದೆ.
➤ ರಾಜ್ಯವಾರು ಸ್ಥಿತಿಗತಿ: 
  • 100% ವಿದ್ಯುದ್ದೀಕರಣ ಪಡೆದ ರಾಜ್ಯಗಳು: ಆಂಧ್ರಪ್ರದೇಶ, ಬಿಹಾರ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಪಂಜಾಬ್, ಕೇರಳ, ಒಡಿಶಾ, ಹರಿಯಾಣ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಜಾರ್ಖಂಡ್ ಇತ್ಯಾದಿ.
  • ಕರ್ನಾಟಕ: 96.8%
  • ರಾಜಸ್ಥಾನ: 99.8% | ತಮಿಳುನಾಡು: 98.3% | ಗೋವಾ: 91.4%