* ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನವದೆಹಲಿ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಯುಎಇ ನಾಗರಿಕ ಪರಮಾಣು ಸಹಕಾರಕ್ಕಾಗಿ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿವೆ.
* ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ಹೂಡಿಕೆಯ ಅವಕಾಶಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ NPCIL ಮತ್ತು ENEC ನಡುವಿನ ಈ ರೀತಿಯ ಮೊದಲ ತಿಳುವಳಿಕಾ ಒಪ್ಪಂದವಾಗಿದೆ.
* ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿ (ADNOC) ಮತ್ತು ಇಂಡಿಯಾ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ISPRL) ನಡುವೆ ವಾರ್ಷಿಕವಾಗಿ ಒಂದು ಮಿಲಿಯನ್ ಮೆಟ್ರಿಕ್ ಟನ್ LNG (ದ್ರವೀಕೃತ ನೈಸರ್ಗಿಕ ಅನಿಲ) ಯ ದೀರ್ಘಾವಧಿಯ ಪೂರೈಕೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಾಲ್ಕು ಒಪ್ಪಂದಗಳಲ್ಲಿ ಸೇರಿವೆ ಎಂದು MEA ಹೇಳಿದೆ.
* ಭಾರತದಲ್ಲಿ ಫುಡ್ ಪಾರ್ಕ್ ಆರಂಭಿಸಲು ಗುಜರಾತ್ ಸರಕಾರ ಹಾಗೂ ಅಬುಧಾಬಿ ಡೆವಲಪ್‌ಮೆಂಟಲ್ ಹೋಲ್ಡಿಂಗ್ ಕೆಂಪೆನಿ ಪಿಐಎಸ್‌ಸಿ ಪ್ರತ್ಯೇಕ ಒಪ್ಪಂದವೊಂದಕ್ಕೆ ಕೂಡ ಸಹಿ ಹಾಕಿವೆ.
* ಸಮಗ್ರ ವ್ಯೆಹಾತ್ಮಕ ಬಾಂಧವ್ಯವನ್ನು ವೃದ್ಧಿಸುವ ಗುರಿಯೊಂದಿಗೆ ಭಾರತ ಹಾಗೂ ಯುಎಇ ನಡುವಿನ ಬಹುಮುಖಿ ಬಾಂಧವ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವರಾಜ ಎಐ ನಹ್ಯಾನ್ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇಂಧನ ಕ್ಷೇತ್ರಕ್ಕೆ ಸಂಬಂಧಿಸಿ ಒಪ್ಪಂದಗಳಿಗೆ ಸಹಿ ಹಾಕಿದ ಭಾರತ - ಯುಎಇ
Published by Jyoti Angadi
10 ಸೆಪ್ಟೆಂಬರ್ 2024