* ಇಂಡೋನೇಷ್ಯಾ ಓಪನ್ 2023 ರ ಫೈನಲ್ ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
* ಈ ಬ್ಯಾಡ್ಮಿಂಟನ್ ಟೋರ್ನಿಯನ್ನು ಗೆಲ್ಲುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.
* ಸೂಪರ್ 1000 ಟೂರ್ನಿಯಲ್ಲಿ ಪುರುಷರ ವಿಭಾಗದ ಡಬಲ್ಸ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಯಿತು.
* ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ವಿಶ್ವ ರ‍್ಯಾಂಕಿಂಗ್ ನಲ್ಲಿ ಆರನೇ ಸ್ಥಾನ ದಲ್ಲಿದೆ.
- ಬರ್ಮಿಂಗ್‌ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಈ ಜೋಡಿಯು ಚಿನ್ನ ಜಯಿಸಿತ್ತು.
- ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿತ್ತು. ಹಾಗೂ ಕಳೆದ ಎರಡು ವರ್ಷ ಗಳಿಂದ ಅಮೋಘವಲಯದಲ್ಲಿರುವ ಈ ಜೋಡಿ ಇಂಡೋನೇಷ್ಯಾ ಓಪನ್ 2023 ರ ಫೈನಲ್ ನಲ್ಲಿ ಮಿಂಚಿತು.
'ಇಂಡೋನೇಷ್ಯಾ ಓಪನ್' 2023 ರ ಫೈನಲ್ ನಲ್ಲಿ ಗೆದ್ದ ಭಾರತದ ಸಾತ್ವಿಕ್ ಮತ್ತು ಚಿರಾಗ್
Published by Akshata Halli
19 ಜೂನ್ 2023