* ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಆರು ವರ್ಷಗಳ ಬಳಿಕ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 2019 ರ ನಂತರ ಮೊದಲ ಬಾರಿಗೆ ನಂ. 1 ಸ್ಥಾನವನ್ನು ಮರಳಿ ಪಡೆದರು.
* ದಕ್ಷಿಣ ಆಫ್ರಿಕಾದ ನಾಯಕಿ ವೊಲ್ವಾರ್ಟ್ ಅವರನ್ನು ಹಿಂದಿಕ್ಕಿರುವ ಸ್ಮೃತಿ, 2019ರ ಬಳಿಕ ಇದೇ ಮೊದಲ ಬಾರಿಗೆ ಅಗ್ರಪಟ್ಟ ಅಲಂಕರಿಸಿದ್ದಾರೆ. ನಂ.1 ಸ್ಥಾನದಲ್ಲಿರುವ ಮಂದಾನ ಒಟ್ಟು 727 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ. ಇಂಗ್ಲೆಂಡ್‌ನ ನಾಯಕಿ ನೆತಾಲೀ ಶಿವರ್ ಬ್ರಂಟ್ 719 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
* ದಕ್ಷಿಣ ಆಫ್ರಿಕಾದ ವೊಲ್ವಾರ್ಟ್ ಮೂರನೇ ಸ್ಥಾನಕ್ಕೆ (719)ಕುಸಿದಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ ಪೈಕಿ ಜೆಮಿಮಾ ರಾಡ್ರಿಗಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್, ಅನುಕ್ರಮವಾಗಿ 14 ಹಾಗೂ 15ನೇ ಸ್ಥಾನದಲ್ಲಿದ್ದಾರೆ.
* ಮಹಿಳಾ ಟಿ20 ರ್‍ಯಾಂಕಿಂಗ್ ಪಟ್ಟಿಯಲ್ಲಿ ಮಂದಾನ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ತಿಂಗಳಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಐದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿವೆ.
* ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಆಲ್‌ರೌಂಡರ್‌ಗಳಲ್ಲಿ ಒಂಬತ್ತನೇ ಮತ್ತು ಬ್ಯಾಟ್ಸ್‌ಮನ್‌ಗಳಲ್ಲಿ 13 ನೇ ಸ್ಥಾನದಲ್ಲಿದ್ದಾರೆ.
ICC ODI Rankings 2025 : 6 ವರ್ಷಗಳ ಬಳಿಕ ಸ್ಮೃತಿ ಮಂದಾನಗೆ ಅಗ್ರಸ್ಥಾನ
Published by Jyoti Angadi
18 ಜೂನ್ 2025