* ದೇಶದ ಭೂಸ್ಥಿರ ಉಪಗ್ರಹಗಳಿಂದ ಲಭ್ಯವಾಗುವ ಮಾಹಿತಿಯ ಸಮರ್ಥ ಬಳಕೆಯಿಂದ, ಹವಾಮಾನ ವರದಿ ಜತೆಗೆ ಸಿಡಿಲಿನ ನಿಖರ ಮಾಹಿತಿ ನೀಡುವುದು ಈಗ ಸಾಧ್ಯವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
* 'ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ) ಈ ಮಹತ್ವದ ಸಾಧನೆ ಮಾಡಿದಿದ್ದು, ಹವಾಮಾನ ಮುನ್ಸೂಚನೆ ಕ್ಷೇತ್ರದಲ್ಲಿ ಇದು ಒಂದು ಪ್ರಮುಖ ಬೆಳವಣಿಗೆಯಾಗಿದೆ' ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
* 'ಭೂಮಿಯ ಮೇಲ್ಮನ ಟ್ರೊಪೋಸ್ಟಿಯರ್‌ನಲ್ಲಿ ಗಾಳಿ, ತಾಪಮಾನ ಮತ್ತು ವಿಕಿರಣಗಳ ನಡುವಿನ ಘರ್ಷಣೆಯಿಂದ ಗುಡುಗು, ಮಿಂಚು ಹಾಗೂ ಸಿಡಿಲು ಉಂಟಾಗುತ್ತವೆ. ಸಂಶೋಧಕರು
* 'ಮಿಂಚಿನ ಲಕ್ಷಣಗಳನ್ನುಇನ್‌ಸ್ಯಾಟ್-3ಡಿ ಉಪಗ್ರಹದಿಂದ ಹೊರ ಹೋಗುವ ಲಾಂಗ್‌ವೇವ್ ರೇಡಿಯೇಷನ್ (ಒಎಲ್‌ಆರ್) ಮೂಲಕ ಗುರುತಿಸಿದ್ದಾರೆ. ಒಎಲ್‌ಆರ್ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಮಿಂಚು, ಗುಡುಗು ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. ಈ ಮಾಹಿತಿಯನ್ನು ಇನ್‌ಸ್ಯಾಟ್ ಸರಣಿಯ ಉಪಗ್ರಹಗಳು ಪತ್ತೆ ಮಾಡುತ್ತವೆ' ಎಂದು ವಿವರಿಸಲಾಗಿದೆ.
* 'ಗುಡುಗು, ಮಿಂಚು ಮತ್ತು ಸಿಡಿಲಿನ ಮಾಹಿತಿಯನ್ನು ಭೂಮಿಯ ಮೇಲಿನ ಅಧ್ಯಯನ ಕೇಂದ್ರಕ್ಕೆ ಉಪಗ್ರಹಗಳ ಮೂಲಕ ಕಳುಹಿಸಲಾಗುತ್ತದೆ. ದಿನದ ಯಾವ ಸಮಯದಲ್ಲಿ ಇವುಗಳ ಪ್ರಮಾಣ ಹೆಚ್ಚಾಗಬಹುದು ಎಂಬುದನ್ನು ನಿರ್ಧರಿಸುವುದು ಸಹ ಸಾಧ್ಯವಾಗಿದೆ. ಇದರ ಮೂಲಕ 2.5 ಗಂಟೆ ಮುಂಚಿತವಾಗಿ ಮುನ್ಸೂಚನೆ ನೀಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಇಸ್ರೋ ತಿಳಿಸಿದೆ.
ಗುರುವಾರ, 03 ಎಪ್ರಿಲ್ 2025
3:44 ಅಪರಾಹ್ನ
Daily PDF
ಹವಾಮಾನ ಮುನ್ಸೂಚನೆಗೆ ಇಸ್ರೋದ ನೂತನ ಮಾಹಿತಿ ತಂತ್ರ
Authored by:
Jyoti Angadi