* ಹುರುನ್ ಸಂಶೋಧನಾ ಸಂಸ್ಥೆಯು ಮಾರ್ಚ್ 26 ರಂದು ಪ್ರಕಟಿಸಿರುವ ವರದಿ 2024 ರ ಪ್ರಕಾರ ಏಷ್ಯಾದಲ್ಲಿಯೇ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿದ ನಗರವೆಂಬ ಹೆಗ್ಗಳಿಕೆಗೆ ಮುಂಬೈ ಭಾಜನವಾಗಿದೆ.
* ಮೊದಲ ಬಾರಿಗೆ, ಮುಂಬೈ ಏಷ್ಯಾದ ಹೊಸ ಬಿಲಿಯನೇರ್ ರಾಜಧಾನಿಯಾಗಿ ಹೊರಹೊಮ್ಮಿದೆ, ಚೀನಾದ ರಾಜಧಾನಿ ಬೀಜಿಂಗ್ ಅನ್ನು ಹಿಂದಿಕ್ಕಿದೆ.
* ಮುಂಬೈನಲ್ಲಿ 92 ಶತಕೋಟ್ಯಧಿಪತಿಗಳಿದ್ದರೆ (₹8,330 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರು), ಬೀಜಿಂಗ್‌ನಲ್ಲಿ 91 ಮಂದಿ ಇದ್ದಾರೆ. ಚೀನಾದಲ್ಲಿ 814 ಶತಕೋಟ್ಯಧಿಪತಿಗಳಿದ್ದರೆ, ಭಾರತ ದಲ್ಲಿ 271 ಮಂದಿ ಇದ್ದಾರೆ ಎಂದು ವರದಿ ವಿವರಿಸಿದೆ.
* ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಕಾಲ ಕ್ಕಿಂತಲೂ ಅಸಮಾನತೆ ಪ್ರಮಾಣ ಹೆಚ್ಚಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಪ್ಯಾರಿಸ್ ಮೂಲದ ವಿಶ್ವ ಅಸಮಾನತೆ ಲ್ಯಾಬ್‌ನ ವರದಿ ಹೇಳಿತ್ತು. ಇದರ ಬೆನ್ನಲ್ಲೇ ಈ ಸಿರಿವಂತರ ಪಟ್ಟಿ ಹೊರಬಿದ್ದಿದೆ. ಭಾರತದ ಶತಕೋಟ್ಯಧಿಪತಿಗಳ ಸಂಪತ್ತು ₹83 ಲಕ್ಷ ಕೋಟಿಗೆ ಮುಟ್ಟಿದೆ.
* ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರು, ₹9.57 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಭಾರತದ ಸಿರಿವಂತರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
* ಜಾಗತಿಕ ಮಟ್ಟದ ಸಿರಿವಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 10ನೇ ಸ್ಥಾನ ಪಡೆದಿದ್ದರೆ, ಗೌತಮ್ ಅದಾನಿ 15ನೇ ಸ್ಥಾನದಲ್ಲಿದ್ದಾರೆ. ಟೆಸ್ಲಾ ಕಂಪನಿಯ ಮುಖ್ಯಸ್ಥ ಇಲಾನ್ ಮಸ್ಕ್ ಜಗತ್ತಿನ ಅತಿದೊಡ್ಡ ಶ್ರೀಮಂತರಾಗಿದ್ದಾರೆ.
* ಕಳೆದ ವರ್ಷ ಮುಂಬೈನಲ್ಲಿ ಶತಕೋಟ್ಯಧಿಪತಿಗಳ ಪಟ್ಟಿಗೆ ಹೊಸದಾಗಿ 27 ಮಂದಿ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಹೋಲಿಸಿದರೆ ಬೀಜಿಂಗ್‌ನಲ್ಲಿ 6 ಮಂದಿಯಷ್ಟೇ ಸೇರ್ಪಡೆಯಾಗಿದ್ದಾರೆ. ಮುಂಬೈ 'ಸಂಪತ್ತಿನ ಕೇಂದ್ರ' ವೆಂದು ಪ್ರಸಿದ್ದಿ ಪಡೆದಿದೆ ಎಂದು ವರದಿ ತಿಳಿಸಿದೆ.
* ಮುಂಬೈನ ನಂಬಲಾಗದ ಆರೋಹಣವನ್ನು "ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2024" ವರದಿಯಲ್ಲಿ ಹೈಲೈಟ್ ಮಾಡಲಾಗಿದೆ, ಈ ನಗರವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬಿಲಿಯನೇರ್ ರಾಜಧಾನಿ ಎಂದು ಹೇಳಿಕೊಂಡಿದೆ
* ವಿಶ್ವದ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ನಗರಗಳ ಪಟ್ಟಿ
ನ್ಯೂಯಾರ್ಕ್-119
ಲಂಡನ್-97
ಮುಂಬೈ-92
ಬೀಜಿಂಗ್-91
ಶಾಂಘೈ-87
ಶೆನ್ಜೆನ್-84
ಹಾಂಗ್ ಕಾಂಗ್-65
ಮಾಸ್ಕೋ-59
ನವದೆಹಲಿ-57
ಸ್ಯಾನ್ ಫ್ರಾನ್ಸಿಸ್ಕೋ-52
* ಜಾಗತಿಕ ಶ್ರೀಮಂತರು ಮತ್ತು ಒಟ್ಟು ಸಂಪತ್ತು (ಲಕ್ಷ ಕೋಟಿಗಳಲ್ಲಿ)
ಇಲಾನ್ ಮಸ್ಕ್ 19.24
ಜೆಫ್ ಬೆಜಾಸ್ 15.41
ಬರ್ನಾರ್ಡ್ ಅರ್ನಾಲ್ಡ್ 14.57
ಮಾರ್ಕ್ ಜುಕರ್ ಬರ್ಗ್ 13.16
ಲ್ಯಾರಿ ಎಲ್ಲಿಸನ್ 11.99
ವಾರೆನ್ ಬಫೆಟ್ 11.99
ಸ್ಟೀವ್ ಬಾಲ್ಕರ್ 11.91
ಬಿಲ್ ಗೇಟ್ಸ್ 11.49
ಲ್ಯಾರಿ ಪೇಜ್ 10.24
ಮುಕೇಶ್ ಅಂಬಾನಿ 9.57
ಬುಧವಾರ, 27 ಮಾರ್ಚ್ 2024
12:00 ಅಪರಾಹ್ನ
Daily PDF
ಹುರುನ್ ಸಂಶೋಧನಾ ಸಂಸ್ಥೆಯ ವರದಿ 2024 : ಮುಂಬೈ ಶತಕೋಟ್ಯಾಧಿಪತಿಗಳ ರಾಜಧಾನಿ
Authored by:
Akshata Halli