* ಬೆಂಗಳೂರು ಸಿಲಿಕಾನ್ ಸಿಟಿ ಮಾತ್ರವಲ್ಲದೆ, ಯುವ ಸಿರಿವಂತರಿಗೂ ರಾಜಧಾನಿಯಾಗಿದೆ.
* ಹುರನ್ ಇಂಡಿಯಾ ಸಂಸ್ಥೆಯು 2024 ನೇ ಸಾಲಿನ 35 ವರ್ಷದೊಳಗಿನ 150 ಯುವ ಉದ್ಯಮಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಬೆಂಗಳೂರಿನ 29 ಯುವ ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.
* ದೇಶದ 41 ನಗರಗಳ ಪೈಕಿ ಅತಿ ಹೆಚ್ಚು ಉದ್ಯಮಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ ಮತ್ತು ಮುಂಬೈ ಎರಡನೇ ಸ್ಥಾನದಲ್ಲಿದೆ.
* ಶೇರ್ ಚಾಟ್ ನ ಅಂಕುಶ್ ಸಚದೇವ್ (31) ಅತಿ ಕಿರಿಯ ವಯಸ್ಸಿನ ಉದ್ಯಮಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕನಿಷ್ಠ 50 ಡಾಲರ್ (418 ಕೋಟಿ ರೂ.) ಮಿಲಿಯನ್ ವ್ಯವಹಾರ ಹೊಂದಿರುವ ಕಂಪನಿಯನ್ನು ಆಧರಿಸಿ ಈ ಪಟ್ಟಿ ಪ್ರಕಟಣೆ ಮಾಡಲಾಗಿದೆ.
* ಐಐಟಿ ಮದ್ರಾಸ್‌ನಲ್ಲಿ ಪದವಿ ಪಡೆದ 13 ಉದ್ಯಮಿಗಳು, ಐಐಟಿ ಬಾಂಬೆಯಲ್ಲಿ ವ್ಯಾಸಂಗ ಮಾಡಿದ 11 ಹಾಗೂ ಐಐಟಿ ಖರಗಪುರ್‌ನಲ್ಲಿ ಓದಿದ 10 ವಿದ್ಯಾರ್ಥಿಗಳು ಈ ಪಟ್ಟಿಯಲ್ಲಿದ್ದಾರೆ.
* ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ (32) ಹಾಗೂ ಟಾಡಲ್‌ನ ಪರಿತಾ ಪರೇಖ್ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಅತಿ ಕಿರಿಯರಾಗಿದ್ದಾರೆ.
* ಈ ಪಟ್ಟಿಯಲ್ಲಿ ಹೆಸರು ಪಡೆದಿರುವ ಶೇ.82 ಮಂದಿ ಮೊದಲ ತಲೆಮಾರಿನ ಉದ್ಯಮಿಗಳಾಗಿದ್ದರೆ. 150 ಜನರಲ್ಲಿ ೧೨೩ ಜನರು ಕೆಳಮಟ್ಟದಿಂದ ಕಂಪನಿಗಳನ್ನು ಕಟ್ಟಿದ್ದಾರೆ.
ಶನಿವಾರ, 28 ಸೆಪ್ಟೆಂಬರ್ 2024
12:05 ಅಪರಾಹ್ನ
Daily PDF
ಹುರನ್ ಇಂಡಿಯಾದಲ್ಲಿ ಯುವ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ
Authored by:
Akshata Halli