* ಹರಿಯಾಣ ರಾಜ್ಯದ ಶಾಲೆಗಳಲ್ಲಿ 'ಶುಭೋದಯ' ದ (Good Morning) ಬದಲು ಜೈಹಿಂದ್ ಹೇಳಬೇಕು ಎಂದು ಹರಿಯಾಣ ಸರ್ಕಾರ ಸುತ್ತೋಲೆ ಹೊರಡಿಸಿದೆ.
* ಈ ಕ್ರಮವು ಮಕ್ಕಳಲ್ಲಿ ದೇಶಭಕ್ತಿ ಮತ್ತು ರಾಷ್ಟೀಯ ಹೆಮ್ಮೆ ಆಳವಾಗಿ ಬೇರೂರಬೇಕು ಎಂಬುವ ಗುರಿಯನ್ನು ಹೊಂದಿದೆ.
* ಹರಿಯಾಣದ ಶಾಲಾ ಶಿಕ್ಷಣ ಮಂಡಳಿ ಆಗಸ್ಟ್ 8 ರಂದು ಸುತ್ತೋಲೆ ಹೊರಡಿಸಿದ್ದು, ಆಗಸ್ಟ್ 15 ರಂದು ನಡೆಯಲಿರುವ 78 ನೇ ಸ್ವಾತಂತ್ರದ ಬಳಿಕ ರಾಜ್ಯದ ಎಲ್ಲ ಶಾಲೆಗಳಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.
* ‘ಜೈ ಹಿಂದ್’ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸುಭಾಸ್ ಚಂದ್ರ ಬೋಸ್ ಅವರು ಮೊದಲು ಬಳಕೆ ಮಾಡಿದರು. ಸ್ವಾತಂತ್ರ್ಯದ ನಂತರ ಸಶಸ್ತ್ರ ಪಡೆಗಳಿಂದ ಸೆಲ್ಯೂಟ್ ಆಗಿ ಈ ಘೋಷಣೆಯನ್ನು ಅಳವಡಿಸಲಾಯಿತು.
* ಮಕ್ಕಳು ಪ್ರತಿದಿನ ಶುಭಕೋರುವುದರ ಜೊತೆಗೆ ಸ್ವಾತ್ಯಂತ್ರ ಹೋರಾಟದ ವೇಳೆ ತ್ಯಾಗ ಬಲಿದಾನ ಮಾಡಿದ ಹಿರಿಯರಿಗೆ ಗೌರವ ಸೂಚಿಸಿದಂತಾಗುತ್ತದೆ.
* ಜೈ ಹಿಂದ್ ಎನ್ನುದು ಭಾಷೆ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಎಲ್ಲೆಯನ್ನು ಮೀರಿದ್ದು ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಭಾವವನ್ನು ಮೂಡಿಸುತ್ತದೆ. ಮಕ್ಕಳಲ್ಲಿ ಶಿಸ್ತು ಹಾಗೂ ಏಕತೆಯನ್ನು ಮೂಡಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ, 10 ಆಗಸ್ಟ್ 2024
1:20 ಅಪರಾಹ್ನ
Daily PDF
ಹರಿಯಾಣ ಶಾಲೆಗಳಲ್ಲಿ ಆಗಸ್ಟ್ 15ರಿಂದ 'ಶುಭೋದಯ' ದ ಬದಲಿಗೆ ‘ಜೈ ಹಿಂದ್’ ಬಳಕೆ
Authored by:
Jyoti Angadi