* ಇಸ್ರೋದ ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ "ಶಿಲಾಪಾಕ ಸಾಗರ" ಸಿದ್ಧಾಂತವನ್ನು ಬೆಂಬಲಿಸುವ ಹೊಸ ಪುರಾವೆಗಳನ್ನು ಒದಗಿಸಿದೆ. ಚಂದ್ರನ ದಕ್ಷಿಣ ಧ್ರುವದಿಂದ ದತ್ತಾಂಶವು ಚಂದ್ರನ ಆರಂಭಿಕ ವಿಕಸನ ಮತ್ತು ಕ್ರಸ್ಟ್ ಸಂಯೋಜನೆಯ ಗಮನಾರ್ಹ ಒಳನೋಟಗಳನ್ನು ಬಹಿರಂಗಪಡಿಸುತ್ತದೆ.
* ಕಳೆದ ವರ್ಷದ ಆಗಸ್ಟ್ -ಸೆಪ್ಟೆಂಬರ್ ತಿಂಗಳಿನಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ನಡೆಸಿದ ಸುದೀರ್ಘ ಕಾರ್ಯಾಚರಣೆಯ ವೇಳೆ ಪ್ರಗ್ಯಾನ್ ರೋವರ್‌ನಲ್ಲಿರುವ ಉಪಕರಣದಿಂದ ನಡೆಸಲಾದ ಚಂದ್ರನ ದೀರ್ಘಕಾಲದ ಮಣ್ಣಿನ 23 ಸೆಟ್ ಪುರಾವೆಗಳನ್ನು ರಾಸಾಯನಿಕ ವಿಶ್ಲೇಷಣೆಯ ಫಲಿತಾಂಶಗಳು ಈ ಪುರಾವೆ ಒದಗಿಸಿವೆ.
* ಚಂದ್ರನ ದಕ್ಷಿಣ ಧ್ರುವದ ಬಳಿಯ ಸಂಯೋಜನೆಯು ಏಕರೂಪವಾಗಿದೆ ಮತ್ತು ಎತ್ತರದ ಪ್ರದೇಶಗಳಿಗೆ ಹೋಲುತ್ತದೆ.
* ಚಂದ್ರಯಾನ- 4 ಯೋಜನೆಯು 2027ಕ್ಕೆ ಉಡಾವಣೆ ಮಾಡಲು ನಿಗದಿ ಪಡಿಸಲಾಗಿದೆ.
* ಚಂದ್ರಯಾನ-5 ಯೋಜನೆಯು ಜಪಾನನ ಏರೋಸ್ಪೇಸ್ ಏಕ್ಸ್ ಪ್ಲೋರೇಷನ್ ಏಜೆನ್ಸಿಯೊಂದಿಗೆ ಕೈಗೊಂಡಿರುವ ಜಂಟಿ ಯೋಜನೆಯಾಗಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ, 22 ಆಗಸ್ಟ್ 2024
3:38 ಅಪರಾಹ್ನ
Daily PDF
ಹೊಸ ಪುರಾವೆ ಒದಗಿಸಿದ ಚಂದ್ರಯಾನ-3
Authored by:
Bhagya R K